Advertisement
ಮಂಗಳವಾರ ರಾತ್ರಿ ದಂಪತಿ ಮಲಗುವ ಮೊದಲು ಸೊಳ್ಳೆ ಬತ್ತಿ ಹಾಗೂ ಮೇಣದ ಬತ್ತಿ ಹಚ್ಚಿದ್ದು, ತಲೆ ದಿಂಬಿನ ಪಕ್ಕ ಇರಿಸಿಕೊಂಡಿದ್ದರು ಎನ್ನಲಾಗಿದೆ. ಈ ವೇಳೆ ತಡರಾತ್ರಿ ದಿಂಬಿಗೆ ಬೆಂಕಿಯ ಕಿಡಿ ತಗುಲಿ, ನಂತರ ಬೆಂಕಿಯ ಕೆನ್ನಾಲಗೆ ಇಡೀ ಮನೆ ಆವರಿಸಿದ್ದು, ಮನೆ ತುಂಬ ದಟ್ಟ ಹೊಗೆ ತುಂಬಿಕೊಂಡಿದೆ. ಗಾಢ ನಿದ್ರೆಯಲ್ಲಿದ್ದ ದಂಪತಿಗೆ ಕೆಲ ಸಮಯದ ನಂತರ ಎಚ್ಚರವಾಗಿದ್ದು, ಮನೆಯಿಂದ ಹೊರಬರ ಲಾಗದೆ ಬೆಂಕಿಗೆ ಸಿಲುಕಿ ಸುಟ್ಟು ಕರಕಲಾಗಿದ್ದಾರೆ. ಶೇ.80ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ಫ್ಲೋರಾ, ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಮೃತಳಾದಳು ಎಂದು ಪೊಲೀಸರು ತಿಳಿಸಿದ್ದಾರೆ.
ಮನೆ ಆವರಿಸಿದೆ. ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಮಗು ಬಾಗಿಲವರೆಗೆ ಬಂದು ನರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
Related Articles
Advertisement
ಗಾಳಿ ಸುಳಿಯಲು ಜಾಗವೇ ಇರಲಿಲ್ಲ: ಉದಯನಗರದಲ್ಲಿರುವ ಸಂತೋಷ್ ಮನೆ ಬಹಳ ಚಿಕ್ಕದಾಗಿದೆ. ಹೀಗಾಗಿ ಸುತ್ತ ಗಾಳಿ ಸುಳಿಯಲು ಸ್ಥಳಾವಕಾಶವಿಲ್ಲ. ಮನೆಯ ಒಂದು ಭಾಗದಲ್ಲಿ ದೊಡ್ಡ ಕಟ್ಟಡ ತಲೆ ಎತ್ತಿದ್ದು, ಮತ್ತೂಂದು ಭಾಗದಲ್ಲಿ ಬೃಹತ್ ಕಟ್ಟಡ ನಿರ್ಮಾಣವಾಗುತ್ತಿದೆ. ಹಿಂದೆ ಕೂಡ ಮನೆಗಳಿವೆ.
ಹಳ್ಳದ ಪುಟ್ಟ ಜಾಗದಲ್ಲಿ ಮನೆ ನಿರ್ಮಾಣವಾಗಿದೆ. ಅಲ್ಲದೇ ಮಲಗುವ ಕೊಣೆಯಲ್ಲಿ ಕಿಟಕಿಗಳಿಲ್ಲ. ಹೀಗಾಗಿ ದಂಪತಿ ಹಾಗೂ ಮಗು ಮೃತಪಟ್ಟಿದ್ದಾರೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.
ಹಲವು ಅನುಮಾನ: ಮಲಗುವ ಕೋಣೆಯಲ್ಲಿ ದಂಪತಿ ಒಬ್ಬರ ಮೇಲೊಬ್ಬರು ಮಲಗಿದ ಸ್ಥಿತಿಯಲ್ಲಿ ಸಜೀವ ದಹನವಾಗಿದ್ದಾರೆ. ಮತ್ತೂಂದೆಡೆ 6 ವರ್ಷದ ಪುತ್ರಿ ನಡುಮನೆಗೆ ಬಂದದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಜತೆಗೆ ಮನೆಯಲ್ಲಿರುವ ಕೇಬಲ್‌ಗಳು ಚೆನ್ನಾಗಿವೆ. ನಡುಮನೆಯಲ್ಲಿರುವ ಫ್ಯಾನ್ ಮತ್ತು ಟ್ಯೂಬ್‌ಲೈಟ್‌ನ ಸ್ವಿಚ್ ಬೋರ್ಡ್ ಹೊರಬಂದಿದೆ. ಮಲಗುವ ಕೋಣೆಯಲ್ಲಿರುವ ಟ್ಯೂಬ್‌ಲೈಟ್ ಸ್ಫೋಟಗೊಂಡಿದೆ. ಹೀಗಾಗಿ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ವ್ಯಾಪಿಸಿರಲು ಸಾಧ್ಯವಿಲ್ಲ. ಹೀಗೇ ಘಟನೆ ಕುರಿತು ಅನುಮಾನಗಳಿದ್ದು, ವಿಧಿ ವಿಜ್ಞಾನ ಪರೀಕ್ಷೆಯ ವರದಿ ಬಳಿಕ ಸ್ಪಷ್ಟತೆ ಸಿಗಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪುಣೆಯಲ್ಲಿರುವ ಸಂಬಂಧಿ ಮನೆಯಲ್ಲಿ ಕ್ರಿಸ್‌ಮಸ್ ಆಚರಣೆಗೆ ಹೋಗಿದ್ದೆವು. ಬುಧವಾರ ಬೆಳಗ್ಗೆ ಅಣ್ಣ, ಅತ್ತಿಗೆ ಹಾಗೂ ಮಗಳು ಮೃತಪಟ್ಟಿದ್ದಾರೆ ಎಂಬ ಸುದ್ದಿ ತಿಳಿಯಿತು. ವಿಶೇಷ ವಿಮಾನದಲ್ಲಿ ಪುಣೆಯಿಂದ ಬೆಂಗಳೂರಿಗೆ ಬಂದಿದ್ದೇವೆ. ನೈಟ್ರೋಜನ್ ಗ್ಯಾಸ್ ಸೇವನೆಯಿಂದ ಮೂವರೂ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ●ಸತೀಶ್, ಮೃತ ಸಂತೋಷ್‌ರ ಸೋದರ