ಶ್ರೀನಗರ: ಜಮ್ಮು ಕಾಶ್ಮೀರ ಪೊಲೀಸರು ಮೂರು ಲಷ್ಕರ್ ಎ ತೋಯ್ಬಾ ಸಂಘಟನೆಯ ಮೂವರು ಉಗ್ರರನ್ನು ಬಂಧಿಸಿದ್ದಾರೆ. ಉತ್ತರ ಕಾಶ್ಮೀರದ ಸೋಪೋರ್ ನಲ್ಲಿ ಈ ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಇತ್ತೀಚೆಗೆ ಸ್ಥಳೀಯರಲ್ಲದ ಕಾರ್ಮಿಕರ ಹತ್ಯೆಗಳು ಮತ್ತು ಅನೇಕ ಸ್ಥಳಗಳಲ್ಲಿ ಗ್ರೆನೇಡ್ ದಾಳಿಗಳ ಬಗ್ಗೆ ತನಿಖೆ ನಡೆಸಲಾಯಿತು. ವಿವಿಧ ಸ್ಥಳಗಳಿಂದ ಶಂಕಿತ ವ್ಯಕ್ತಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇವರ ನಿರಂತರ ವಿಚಾರಣೆಯಿಂದ ಹತ್ಯೆಗಳ ಹಿಂದೆ ಎಲ್ಇಟಿ ಸಂಘಟನೆಯ ಪಾತ್ರವನ್ನು ಪತ್ತೆ ಮಾಡಲಾಗಿದೆ ಎಂದು ಹೇಳಿದರು.
ಮೇ 2 ರಂದು, ಹೈಗಮ್ ಪ್ರದೇಶದ ತೋಟಗಳಲ್ಲಿ ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಚಲಿಸುತ್ತಿರುವುದನ್ನು ಭದ್ರತಾ ಪಡೆಗಳು ಗಮನಿಸಿವೆ. ಈ ವೇಳೆ ಈ ಮೂವರು ತಪ್ಪಿಸಿಕೊಳ್ಳಲು ಯತ್ನಿಸಿವೆ, ಆದರೆ ಭದ್ರತಾ ಪಡೆಗಳು ಅವರನ್ನು ಸೆರೆ ಹಿಡಿಯುವಲ್ಲಿ ಸಫಲವಾಗಿದೆ.
ಇದನ್ನೂ ಓದಿ:ಎರಡು ಭಾರೀ ಗಾತ್ರದ ಹೆಬ್ಟಾವುಗಳ ಜತೆ ವ್ಯಕ್ತಿಯ ಡ್ಯಾನ್ಸ್… ವಿಡಿಯೋ ಸಿಕ್ಕಾಪಟ್ಟೆ ವೈರಲ್
ಬಂಧಿತರನ್ನು ಉಸ್ಮಾನ್-ಬಾದ್ ವಾರ್ಪೋರಾದ ತಫ್ಹೀಮ್ ರೆಯಾಜ್, ಸೋಪೋರ್ ನ ಸೀರತ್ ಶಾಬಾಜ್ ಮಿರ್ ಮತ್ತು ಮಿರ್ಪೋರಾ ನ ರಮೀಜ್ ಅಹ್ಮದ್ ಖಾನ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಮೂರು ಚೀನಾ ನಿರ್ಮಿತ ಪಿಸ್ತೂಲುಗಳನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ