Advertisement

ಕುಪ್ವಾರಾದಲ್ಲಿ ಹಿಮಪಾತ: ಮೂವರು ಯೋಧರು ನಾಪತ್ತೆ

09:44 AM Dec 05, 2019 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ತಂಗ್ಧರ್ ಪ್ರದೇಶದಲ್ಲಿ ಹಿಮಪಾತ ಸಂಭವಿಸಿದ ಪರಿಣಾಮ ಭಾರತೀಯ ಸೇನೆಯ ಮೂವರು ಯೋಧರು ನಾಪತ್ತೆಯಾಗಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿವೆ.

Advertisement

ಬುಧವಾರ ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಹಿಮಪಾತ ಸಂಭವಿಸಿದ್ದು ಕಾಣೆಯಾದ ಯೋಧರನ್ನು ಹುಡುಕಲು ಸೇನೆ ಶೋಧ ಕಾರ್ಯಾಚರಣೆ ಆರಂಭಿಸಿದೆ. ಮಂಜುಗಡ್ಡೆಯ ಅಡಿಯಲ್ಲಿ ಸಿಲುಕಿದ್ದ ಓರ್ವ ಯೋಧನನ್ನು ರಕ್ಷಿಸಲಾಗಿದೆ. ಅದಾಗ್ಯೂ ಕಠಿಣ ಹವಾಮಾನ ಪರಿಸ್ಥಿತಿ ರಕ್ಷಣಾ ಕಾರ್ಯಾಚರಣೆಯನ್ನು ಕಷ್ಟಕರವಾಗಿಸಿದೆ.

ಈ ಮೊದಲು ನವೆಂಬರ್ 18 ರಂದು ಸಿಯಾಚಿನ್ ದಕ್ಷಿಣ ವಲಯದಲ್ಲಿ ಹಿಮಪಾತ ಸಂಭವಿಸಿದ ಪರಿಣಾಮ ನಾಲ್ಕು ಭಾರತೀಯ ಸೈನಿಕರು ಸಾವನ್ನಪ್ಪಿದ್ದರೆ, ಹಲವಾರು ಮಂದಿ ಗಾಯಗೊಂಡಿದ್ದರು. ಸಮುದ್ರ ಮಟ್ಟಕ್ಕಿಂತ ಸುಮಾರು 18,000 ಅಡಿ ಎತ್ತರದಲ್ಲಿ ಈ ಘಟನೆ ನಡೆದಿತ್ತು. ತತ್‌ಕ್ಷಣವೇ ಸ್ಥಳಕ್ಕೆ ತೆರಳಿದ ಹಿಮಪಾತ ರಕ್ಷಣಾ ಕಾರ್ಯಪಡೆ (ಎಆರ್‌ಟಿ) ತಂಡದ ಸಿಬಂದಿ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಹಿಮದ ಅಡಿ ಸಿಲುಕಿದ್ದ ಇತರ ಯೋಧರನ್ನು ರಕ್ಷಣೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next