Advertisement

ಮಾವೋ ಉಗ್ರರಿಂದ ಐಇಡಿ ಬ್ಲಾಸ್ಟ್‌: ಮೂವರು ಜವಾನರಿಗೆ ಗಾಯ

03:57 PM Sep 01, 2018 | udayavani editorial |

ರಾಯಪುರ : ಛತ್ತೀಸ್‌ಗಢದ ಸುಕಮಾ ಜಿಲ್ಲೆಯ ರಬ್ದಿಪಾರಾ ಗ್ರಾಮದಲ್ಲಿ ನಡೆದಿರುವ ಐಇಡಿ ಬ್ಲಾಸ್ಟ್‌ನಲ್ಲಿ ಮೂವರು ಜಿಲ್ಲಾ ಮೀಸಲು ಗಾರ್ಡ್‌ (ಡಿಆರ್‌ಜಿ) ಜವಾನರು ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ಇಂದು ನಸುಕಿನ 12.30ರ ಹೊತ್ತಿಗೆ ಫ‌ೂಲ್‌ಬಗ್‌ದಿ ಪೊಲೀಸ್‌ ಠಾಣೆ ವ್ಯಾಪ್ತಿಯ ರಬ್ದಿಪಾರಾ ಗ್ರಾಮದಲ್ಲಿ ಐಇಡಿ ಬ್ಲಾಸ್ಟ್‌ ನಡೆಯಿತು. ನಕ್ಸಲ್‌ ನಿಗ್ರಹ ಕಾರ್ಯಾಚರಣೆಯಲ್ಲಿದ್ದ ಡಿಆರ್‌ಜಿಯ ಮೂವರು ಜವಾನರು ಈ ಬ್ಲಾಸ್ಟ್‌ ನಲ್ಲಿ ಗಾಯಗೊಂಡರು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೋರ್ವರು ತಿಳಿಸಿದರು. 

ಸುದ್ದಿ ತಿಳಿದೊಡನೆಯೇ ಹೆಚ್ಚುವರಿ ಪಡೆ ಸ್ಥಳಕ್ಕೆ ಧಾವಿಸಿ ಬಂದು ಗಾಯಾಳುಗಳನ್ನು ಸುಕಮಾ ಪಟ್ಟಣದ ಆಸ್ಪತ್ರೆಗೆ ದಾಖಲಿಸಿತು ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next