Advertisement
ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರಾಗಿ ವರ್ಗಾವಣೆಗೊಂಡಿದ್ದ ಸಿ.ವಂಶಿಕೃಷ್ಣ ಅವರ ವರ್ಗಾವಣೆರದ್ದುಗೊಳಿಸಿ, ದಾವಣಗೆರೆ ಪೂರ್ವ ವಲಯದ ಎಸಿಬಿ ಎಸ್ಪಿಯಾಗಿ ನೇಮಿಸಲಾಗಿದೆ. ಅದೇ ರೀತಿ ಚನ್ನಪಟ್ಟಣ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾಗಿ ನಿಯುಕ್ತಿಗೊಂಡಿದ್ದ ಹನುಮಂತರಾಯ ಅವರನ್ನು ಮಂಗಳೂರು ನಗರ ಡಿಸಿಪಿ (ಕಾನೂನು ಹಾಗೂ ಸುವ್ಯವಸ್ಥೆ)ಹುದ್ದೆಗೆ ನಿಯೋಜಿಸಿದೆ. ಮಂಗಳೂರು ನಗರ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಜಾಗಕ್ಕೆ ವರ್ಗಾವಣೆಗೊಂಡಿದ್ದ ಎಂ.ಪುಟ್ಟಮಾದಯ್ಯ ಅವರನ್ನು ಚನ್ನಪಟ್ಟಣ ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲರಾಗಿ ಬದಲಾವಣೆ ಮಾಡಲಾಗಿದೆ.