Advertisement

CNG ತುಂಬುತ್ತಿದ್ದಾಗ ಆಟೋ ರಿಕ್ಷಾ ಟ್ಯಾಂಕ್‌ ಸ್ಫೋಟ; ಮೂವರಿಗೆ ಗಾಯ

12:20 PM Oct 20, 2018 | Team Udayavani |

ಮುಂಬಯಿ : ನಗರ ಹೊರವಲಯದ ಮಲಾಡ್‌ನ‌ಲ್ಲಿ ಸಿಎನ್‌ಜಿ ಇಂಧನ ತುಂಬುತ್ತಿದ್ದ ವೇಳೆ ಆಟೋ ರಿಕ್ಷಾ ಇಂಧನ ಟ್ಯಾಂಕ್‌ ಸ್ಫೋಟಗೊಂಡ ಪರಿಣಾಮ ಕನಿಷ್ಠ ಮೂವರು ಗಾಯಗೊಂಡ ಘಟನೆ ಇಂದು ಶನಿವಾರ ಬೆಳಗ್ಗೆ ನಡೆದಿದೆ. 

Advertisement

ಮಲಾಡ್‌ ಪಶ್ಚಿಮದ ಎಸ್‌ ವಿ ರಸ್ತೆಯಲ್ಲಿನ ಮಿಲಾಪ್‌ ಟಾಕೀಸ್‌ ಸಮೀಪದ ಪೆಟ್ರೋಲ್‌ ಪಂಪ್‌ ನಲ್ಲಿ ಈ ದುರ್ಘ‌ಟನೆ ಇಂದು ಬೆಳಗ್ಗೆ 8 ಗಂಟೆಗೆ ನಡೆಯಿತು. 

ಗಾಯಾಳುಗಳನ್ನು ಅನಿಲ್‌ ಮೋರೆ (57), ಸೋಹೇಲ್‌ ಶೇಖ್‌ (57) ಮತ್ತು ಶೈಲೇಶ್‌ ತಿವಾರಿ (25) ಎಂದು ಗುರುತಿಸಲಾಗಿದೆ. ಇವರನ್ನು ಕಾಂದಿವಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಗಾಯಾಳುಗಳ ಪೈಕಿ ಇಬ್ಬರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಸ್ಫೋಟದ ಕಾರಣ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next