Advertisement

ಕಪ್ಪತಗುಡ್ಡ ಹೋರಾಟ ಅಸ್ವಸ್ಥರಾದ ಮೂವರು

03:45 AM Feb 16, 2017 | |

ಗದಗ: ಕಪ್ಪತಗುಡ್ಡ ಸಂರಕ್ಷಣೆಗೆ ಒತ್ತಾಯಿಸಿ ನಗರದ ಗಾಂಧಿವೃತ್ತದಲ್ಲಿ ನಡೆಯುತ್ತಿರುವ ಅಹೋರಾತ್ರಿ ಉಪವಾಸ ಸತ್ಯಾಗ್ರಹ ಮೂರನೇ ದಿನ ಪೂರೈಸಿದ್ದು, ಉಪವಾಸನಿರತ 20 ಜನರಲ್ಲಿ ಮೂವರು ಅಸ್ವಸ್ಥರಾಗಿದ್ದಾರೆ. ಈ ಪೈಕಿ ಒಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಬುಧವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಅಸ್ವಸ್ಥಗೊಂಡ ಪ್ರಭುಗೌಡ ಪಾಟೀಲ್‌ರನ್ನು ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಸಲಾಗಿದೆ. ಕೊಪ್ಪಳದ ಪರಿಸರವಾದಿ ಲಿಂಗರಾಜ ನಡುವಿಮನಿ ಮತ್ತು ಪ್ರತಿಮಾ ನಾಯಕ್‌ ಎಂಬುವರ ಆರೋಗ್ಯವೂ ಏರುಪೇರಾಗಿದ್ದು, ಗ್ಲೂಕೋಸ್‌ಕೊಡಲಾಗಿದೆ. ಆದರೆ ಇವರಿಬ್ಬರು ಆಸ್ಪತ್ರೆಗೆ ದಾಖಲಾಗಿಲ್ಲ.

ಪ್ರತಿಮಾ ನಾಯಕ ಅವರಿಗೆ ರಕ್ತದೊತ್ತಡ ಕಡಿಮೆಯಾಗಿದ್ದು,ಸದ್ಯ ನಿತ್ರಾಣರಾಗಿದ್ದಾರೆ. ಕಪ್ಪತಗುಡ್ಡ ಸಂರಕ್ಷಣೆಗೆ ಒತ್ತಾಯಿಸಿ ಎಸ್‌.ಆರ್‌.ಹಿರೇಮಠ, ರವಿಕಾಂತ ಅಂಗಡಿ, ನಾರಾಯಣ ಸ್ವಾಮಿ, ಸುನೀತಾ ಎಂಬುವರು ಸೇರಿದಂತೆ ಒಟ್ಟು 20 ಜನರು ಅಹೋರಾತ್ರಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಡಾ| ಬಿ.ಎಸ್‌.ಪಾಟೀಲ ನೇತೃತ್ವದ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪವಾಸ ನಿರತರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next