ನಟ ಪ್ರಜ್ವಲ್ ದೇವರಾಜ್ ಮತ್ತು ನಿರ್ದೇಶಕ ರಾಮ್ ನಾರಾಯಣ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ಹೊಸಚಿತ್ರ “ಅಬ್ಬರ’ ತೆರೆಗೆ ಬರೋದಕ್ಕೆ ರೆಡಿಯಾಗುತ್ತಿದೆ. ಇದೇ ವೇಳೆ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಲು ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ,ಕೆಲ ವಿಷಯಗಳನ್ನು ಹಂಚಿಕೊಂಡಿತು.
ಮೊದಲಿಗೆ ಚಿತ್ರದ ಬಗ್ಗೆ ಮಾತಿಗಿಳಿದ ನಟ ಪ್ರಜ್ವಲ್ ದೇವರಾಜ್, “ಸಿನಿಮಾ ಬರಗಾಲದಲ್ಲಿ ಅಬ್ಬರಿಸಲು ರೆಡಿಯಾಗಿ ಬಂದಿದ್ದೀವಿ.3 ಪಾತ್ರ ಐದು ಶೇಡ್‌ನಲ್ಲಿ ನಿಮ್ಮ ಮುಂದೆ ಬರಲಿದ್ದೇನೆ. ಅಬ್ಬರ ಅನ್ನೋ ಟೈಟಲ್ ನೋಡಿದ್ರೇ ಚಿತ್ರದ ಬಗ್ಗೆ ಒಂದು ಇಮೇಜ್ ಬೆಳೆಯುತ್ತೆ. ಈ ನಿರೀಕ್ಷೆಯನ್ನು ನಿರ್ದೇಶಕ ರಾಮ್ ನಾರಾಯಣ್ ಹೆಚ್ಚಿಸಿದ್ದಾರೆಯೇ ವಿನಃ ಮೋಸ ಮಾಡಿಲ್ಲ. ಈಗಾಗಲೇ ನನ್ನ ತಂದೆ, ತಮ್ಮನಿಗೆ ಅವರು ನಿರ್ದೇಶನ ಮಾಡಿದ್ದಾರೆ. ಇದೀಗ ನನ್ನ ಚಿತ್ರವನ್ನು ನಿರ್ದೇಶಿಸುವುದು ಖುಷಿ ಕೊಟ್ಟಿದೆ’ ಎಂದರು.
ಇದನ್ನೂ ಓದಿ : ಓ ಮೈ ಲವ್‌ನಲ್ಲಿ ಅಕ್ಷಿತ್
ಇನ್ನು “ಅಬ್ಬರ’ ಚಿತ್ರದಲ್ಲಿ ಪ್ರಜ್ವಲ್‌ಗೆ ನಿಮಿಕಾ ರತ್ನಾಕರ್,ರಾಜಶ್ರೀ ಪೊನ್ನಪ್ಪ ಹಾಗೂ ಲೇಖಾ ಚಂದ್ರ ಮೂವರು ನಾಯಕಿಯರಾಗಿ ಕಾಣಿಸಿ ಕೊಳ್ಳುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ರಾಮ್ ನಾರಾಯಣ್, “ಪ್ರಜ್ವಲ್ ಅವರ ಡೆಡಿಕೇಶನ್ ತುಂಬ ಇಷ್ಟವಾಯಿತು. ಪ್ರಜ್ವಲ್ ಅವರು ಕಥೆ ಕೇಳುವ ರೀತಿ, ಕಥೆಯನ್ನು ಬೆಳೆಸುವ ರೀತಿ ಕಂಡು ಬಹಳ ಖುಷಿಯಾಯ್ತು. ಒಂದೇ ದಿನ ಮೂರು ಶೇಡ್‌ನ ಪಾತ್ರಗಳನ್ನು ಮೂವರು ಹೀರೋಯಿನ್ ಜೊತೆಗೆ ಮಾಡಿದ್ದು ಕಂಡು ಥ್ರಿಲ್ ಆದೆ’ ಎಂದರು. ನಾಯಕಿ ನಿಮಿಕಾ ಮಾತನಾಡಿ, “ನನ್ನದು ಎನ್‌ಆರ್‌ಐ ಪಾತ್ರ. ಒಂದು ಹಂತದಲ್ಲಿ ಪ್ರಜ್ವಲ್ ಜೊತೆಗೆ ಲವ್ವಾಗುತ್ತೆ. ಚಿತ್ರದ ಸ್ಕ್ರೀನ್ ಪ್ಲೇ ಅದ್ಭುತವಾಗಿದೆ. ಸಿನಿಮಾಖಂಡಿತಾ ಅಬ್ಬರ ಮಾಡುತ್ತೆ’ ಎಂದರು.
“ರಂಗಭೂಮಿಯಿಂದ ಮತ್ತೆ ಸಿನಿಮಾಕ್ಕೆ ಬಂದು, ಗ್ಲಾಮರ್ ಪಾತ್ರದಿಂದ ಸರಳ ಪಾತ್ರಕ್ಕೆ ಬ್ರೇಕ್ ಕೊಟ್ಟಿರೋದಕ್ಕೆ ಚಿತ್ರ ತಂಡಕ್ಕೆ ಋಣಿ ಯಾಗಿದ್ದೇನೆ’ ಎಂದರು ಮತ್ತೂಬ್ಬ ನಾಯಕಿ ರಾಜಶ್ರೀ.
ಇನ್ನು “ಅಬ್ಬರ’ ಚಿತ್ರದಲ್ಲಿ ರವಿಶಂಕರ್, ಶೋಭರಾಜ್, ಶಂಕರ್ ಅಶ್ವತ್ಥ್ ಮೊದಲಾದವರು ಪ್ರಮುಖಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಜೆ.ಕೆ ಗಣೇಶ್ ಕ್ಯಾಮರ, ರವಿ ಬಸ್ರೂರು ಸಂಗೀತವಿದೆ. ಅಂದಹಾಗೆ, ಇತ್ತೀಚೆಗೆ ನಟ ಶಿವರಾಜಕುಮಾರ್ “ಅಬ್ಬರ’ ಚಿತ್ರದ ಶೀರ್ಷಿಕೆಯನ್ನು ಅನಾವರಣಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದರು.