ನವದೆಹಲಿ: ಹೋಳಿ ಆಚರಣೆ ವೇಳೆ ಯುವಕರ ಗುಂಪೊಂದು ಅಟ್ಟಾಡಿಸಿಕೊಂಡು, ಕಿರುಕುಳ ನೀಡಿ ದೌರ್ಜನ್ಯಕ್ಕೊಳಗಾದ ಜಪಾನ್ ಯುವತಿ ಭಾರತವನ್ನು ತೊರೆದಿದ್ದು, ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಯುವತಿ ಜಪಾನ್ ಪ್ರವಾಸಿಯಾಗಿದ್ದು, ಅವರು ರಾಷ್ಟ್ರ ರಾಜಧಾನಿಯ ಪಹರ್‌ಗಂಜ್‌ನಲ್ಲಿ ತಂಗಿದ್ದರು ಮತ್ತು ಈಗ ಬಾಂಗ್ಲಾದೇಶಕ್ಕೆ ತೆರಳಿದ್ದಾರೆ.
ಬಾಲಾಪರಾಧಿ ಸೇರಿದಂತೆ ಮೂವರನ್ನು ಬಂಧಿಸಲಾಗಿದ್ದು, ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿವರಗಳನ್ನು ಖಚಿತಪಡಿಸಿಕೊಳ್ಳಲು ವಿಡಿಯೋವನ್ನು ವಿಶ್ಲೇಷಿಸಲಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ಸಂಜಯ್ ಕುಮಾರ್ ಸೇನ್ ಹೇಳಿದ್ದಾರೆ.
“ಯಾವುದೇ ವಿದೇಶಿಯರೊಂದಿಗೆ ಯಾವುದೇ ರೀತಿಯ ಅನುಚಿತ ವರ್ತನೆಗೆ ಸಂಬಂಧಿಸಿದ ಯಾವುದೇ ದೂರು ಅಥವಾ ಕರೆಯನ್ನು ಪಹರ್‌ಗಂಜ್ ಪೊಲೀಸ್ ಠಾಣೆಯಲ್ಲಿ ಸ್ವೀಕರಿಸಲಾಗಿಲ್ಲ. ಯುವತಿಯ ಗುರುತು ಅಥವಾ ಘಟನೆಯ ಕುರಿತು ಯಾವುದೇ ಇತರ ವಿವರಗಳನ್ನು ತಿಳಿಯಲು ಸಹಾಯವನ್ನು ಕೋರುವ ಇಮೇಲ್ ಅನ್ನು ಜಪಾನ್ ರಾಯಭಾರ ಕಚೇರಿಗೆ ಕಳುಹಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
Related Articles
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ತೀವ್ರ ಆಕ್ರೋಶ ವ್ಯಕ್ತವಾಗಿತ್ತು, ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ. ವಿಡಿಯೋದಲ್ಲಿ, ಯುವಕರು ಆಕೆಯನ್ನು ಹಿಡಿದುಕೊಂಡು “ಹೋಳಿ ಹೈ” ಎಂಬ ಘೋಷಣೆಗಳ ನಡುವೆ ಬಣ್ಣಗಳನ್ನು ಬಳಿದಿದ್ದಾರೆ.ಒಬ್ಬ ಹುಡುಗ ಅವಳ ತಲೆಯ ಮೇಲೆ ಮೊಟ್ಟೆಯನ್ನು ಒಡೆಯುವುದನ್ನು ಸಹ ಕಾಣಬಹುದು. ಯುವತಿ ತಳ್ಳಲ್ಪತ್ತಿದ್ದು ಗುಂಪಿನಿಂದ ತಪ್ಪಿಸಿಕೊಳ್ಳುವ ಪ್ರಯತ್ನದ ವೇಳೆ ತನ್ನನ್ನು ಹಿಡಿದಿಡಲು ಪ್ರಯತ್ನಿಸುವ ವ್ಯಕ್ತಿಗೆ ಅವಳು ಕಪಾಳಮೋಕ್ಷ ಮಾಡಿರುವುದನ್ನು ವಿಡಿಯೋ ತೋರಿಸುತ್ತದೆ.