ಬೆಂಗಳೂರು: ಮುಂಬರುವ ದ್ವಿಪಕ್ಷೀಯ ಸರಣಿಗಾಗಿ ಭಾರತೀಯ ಅಂಧರ ಕ್ರಿಕೆಟ್ ಅಸೋಸಿಯೇಶನ್ ಇದೇ ಮೊದಲ ಬಾರಿಗೆ ದೇಶವನ್ನು ಪ್ರತಿನಿಧಿಸುವ ಅಂಧರ ವನಿತಾ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಎಪ್ರಿಲ್ 25ರಿಂದ 30ರ ವರೆಗೆ ನೇಪಾಲದಲ್ಲಿ ಈ ದ್ವಿಪಕ್ಷೀಯ ಸರಣಿ ನಡೆಯಲಿದೆ. ಭಾರತ ಮತ್ತು ನೇಪಾಲದ ತಂಡಗಳು ಭಾಗವಹಿಸಲಿವೆ.
Advertisement
17 ಸದಸ್ಯರ ತಂಡವನ್ನು ಮಧ್ಯಪ್ರದೇಶದ ಸುಷ್ಮಾ ಪಟೇಲ್ ಮುನ್ನಡೆಸಲಿದ್ದಾರೆ. ಕರ್ನಾಟಕದ ಗಂಗವ್ವ ನೀಲಪ್ಪ ಹರಿಜನ್ ಉಪನಾಯಕಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಗಂಗವ್ವ ಅವರಲ್ಲದೇ ಕರ್ನಾಟಕದ ವರ್ಷಾ ಮತ್ತು ದೀಪಿಕಾ ತಂಡದಲ್ಲಿದ್ದಾರೆ.