Advertisement
ಚಿತ್ರಮಂದಿರಗಳಿಗೆ ಪೈಪೋಟಿ, ಒಂದು ವಾರಕ್ಕೆ ನಮ್ಮ ಸಿನಿಮಾವನ್ನುಕಿತ್ತಾಕಿದರು ಎಂಬ ಬೇಸರ,ಕೆ.ಜಿ.ರಸ್ತೆಯಲ್ಲಿ ಚಿತ್ರಮಂದಿರ ಹಿಡಿಯುವ ಪ್ರಯತ್ನ … ಎಲ್ಲವೂ ಜೋರಾಗಿಯೇ ನಡೆಯುತ್ತಿತ್ತು. ಆದರೆ,ಕೋವಿಡ್ ಎಂಬ ಮಹಾಮಾರಿಯಿಂದ ಎಲ್ಲವೂಸ್ತಬ್ಧವಾಗಿತ್ತು. ಈಗ ಮತ್ತೆ ಚಿತ್ರರಂಗ ಚಿಗುರುತ್ತಿದೆ. ಹಳೆಯ ದಿನಗಳಿಗೆ ಮರಳುವ ಎಲ್ಲಾ ಲಕ್ಷಣಗಳುಕಾಣುತ್ತಿವೆ.ಕಳೆದ ವಾರ “ಆಕ್ಟ್1978′ ಚಿತ್ರ ತೆರೆಕಾಣುವ ಮೂಲಕ ಹೊಸ ಸಿನಿಮಾಗಳ ಬಿಡುಗಡೆಗೆ ದಾರಿ ಮಾಡಿಕೊಟ್ಟಿದೆ. ವಿಶೇಷವೆಂದರೆ ಈ ವಾರ ಬರೋಬ್ಬರಿ ಮೂರು ಹೊಸ ಸಿನಿಮಾಗಳು ತೆರೆಕಾಣುತ್ತಿವೆ.
Related Articles
Advertisement
ಗಡಿಯಾರ : ಯುವ ನಿರ್ದೇಶಕ ಪ್ರಬಿಕ್ ಮೊಗವೀರ್‌ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿರುವ “ಗಡಿಯಾರ’ ಚಿತ್ರ ಇಂದು ತೆರೆಕಾಣುತ್ತಿದೆ.
ಇನ್ನು “ಗಡಿಯಾರ’ ಚಿತ್ರದಲ್ಲಿ ಬೃಹತ್ ಕಲಾವಿದರ ದಂಡೇ ಇದೆ. ರಾಜ್ ದೀಪಕ್ ಶೆಟ್ಟಿ, ಶೀತಲ್ ಶೀತಲ್ ಶೆಟ್ಟಿ, ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ, ಯಶ್ ಶೆಟ್ಟಿ, ಪ್ರದೀಪ್ ಪೂಜಾರಿ, ಗಣೇಶ್ ರಾವ್, ರಾಧಾ ರಾಮಚಂದ್ರ, ಮನ್‌ದೀಪ್ ರಾಯ್, ಪ್ರಣಯ ಮೂರ್ತಿ, ರಾಜ್ ಮುನಿ, ದಬಾಂಗನಾ ಚೌದರಿ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ನಿವೃತ್ತ ಐಪಿಎಸ್ ಅಧಿಕಾರಿ ಸಾಂಗ್ಲಿಯಾನ, ಮಲಯಾಳಂ ನಟ ರಿಹಾಜ್, ಹಿಂದಿ ನಟ ಗೌರಿ ಶಂಕರ್‌ಕೂಡ ಚಿತ್ರದ ಅತಿಥಿ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
ಅರಿಷಡ್ವರ್ಗ :
ಥ್ರಿಲ್ಲರ್ ಸಿನಿಮಾವಾಗಿ ಗಮನ ಸೆಳೆದಿರುವ ಮತ್ತೂಂದು ಚಿತ್ರವೆಂದರೆ ಅದು “ಅರಿಷಡ್ವರ್ಗ’. ಈಗಾಗಲೇ ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಹಿಟ್‌ಲಿಸ್ಟ್ ಸೇರಿದೆ. ಕನಸು ಟಾಕೀಸ್’ ಬ್ಯಾನರ್ ಅಡಿಯಲ್ಲಿ ಆನಂದ್ ಮತ್ತು ಸ್ನೇಹಿತರ ಜೊತೆ ಸೇರಿ ಅರವಿಂದ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ಸಂಯುಕ್ತ ಹೊರನಾಡು, ಅಂಜು, ಅವಿನಾಶ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿಕಾಣಿಸಿಕೊಂಡಿದ್ದಾರೆ. ಅಂದಹಾಗೆ, “ಈ ಚಿತ್ರದಲ್ಲಿ ಯಾವುದೇ ಲೀಡ್ ರೋಲ್ ಅಂತ ಇಲ್ಲ,ಕೇವಲ ಆರೇಳು ಮುಖ್ಯ ಪಾತ್ರಗಳಿವೆ ಅಷ್ಟೇ. ಆ ಎಲ್ಲ ಪಾತ್ರಗಳೂ ಕಥೆಯ ಸುತ್ತ ಸುತ್ತುತ್ತವೆ’ ಎನ್ನುತ್ತಾರೆ ನಿರ್ದೇಶಕರು.
ಮುಖವಾಡ ಇಲ್ಲದವನು 84 :
ವಿಭಿನ್ನ ಶೀರ್ಷಿಕೆ ಮೂಲಕ ಗಮನ ಸೆಳೆಯುತ್ತಿರುವ “ಮುಖವಾಡ ಇಲ್ಲದವನು 84’ಕೂಡಾ ಈ ವಾರ ತೆರೆಕಾಣುತ್ತಿದೆ. ಗಣಪತಿ ಪಾಟೀಲ್ ಈ ಚಿತ್ರದನಿರ್ಮಾಪಕರು. ನಿರ್ಮಾಣದ ಜೊತೆಗೆ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿದ್ದಾರೆ. ಮೂಲತಃ ವೈದ್ಯಕೀಯ ವೃತ್ತಿಯಲ್ಲಿರುವ ಗಣಪತ್ ಪಾಟೀಲ್‌ಕಳೆದ ಎರಡು ದಶಕಗಳಿಂದ ನ್ಯೂಜಿಲ್ಯಾಂಡ್‌ನಲ್ಲಿ ವಾಸವಿದ್ದಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಸಿನಿಮಾ ಕಲಿಕೆಗೆ ಮೀಸಲಿಡುತ್ತಿದ್ದ ಗಣಪತಿ ಪಾಟೀಲ್, ಈಗ “ಮುಖವಾಡ ಇಲ್ಲದವನು84′ ಚಿತ್ರದ ಮೂಲಕ ನಟನಾಗಿ, ನಿರ್ಮಾಪಕನಾಗಿ ಗಾಂಧಿನಗರಕ್ಕೆ ಪರಿಚಯವಾಗುತ್ತಿದ್ದಾರೆ.