ಮುಂಡರಗಿ (ಗದಗ): ಜಿಲ್ಲೆಯಲ್ಲಿ ವೆಂಟಿಲೇಟರ್ ಸಮಸ್ಯೆ ಉಲ್ಭಣಿಸಿದೆ. ವೆಂಟಿಲೇಟರ್ ಸಿಗದೇ ಮೂವರು ಕೋವಿಡ್ ಸೋಂಕಿತರು ಮೃತಪಟ್ಟಿರುವ ಘಟನೆ ಪಟ್ಟಣದ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ.
ತಾಲೂಕಿನ ಬೂದಿಹಾಳ ಗ್ರಾಮದ ಕನಕಪ್ಪ ತಳವಾರ (87 ವ), ಬಿದರಹಳ್ಳಿಯ ಕಸ್ತೂರೆವ್ವ ವಿ.ಪುತ್ತೂರು ಹಾಗೂ ಕೊಪ್ಪಳ ಜಿಲ್ಲೆಯ ಭೈರಾಪುರ ಗ್ರಾಮದ ನೀಲಮ್ಮ ಮೇಟಿ (48 ವ) ಮೃತಪಟ್ಟಿದ್ದಾರೆ.
ಇದನ್ನೂ ಓದಿ:ವಾಹನವಿಲ್ಲದೆ ಪರದಾಟ: 7 ಕಿ.ಮೀ ನಡೆದ ತುಂಬು ಗರ್ಭಿಣಿ!
ಕೋವಿಡ್ ಸೋಂಕಿತರು ಮುಂಡರಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಂಕಿತರಿಗೆ ರವಿವಾರ ಸಂಜೆಯಿಂದ ಉಸಿರಾಟದಲ್ಲಿ ತೀವ್ರ ತೊಂದರೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವೆಂಟಿಲೇಟರ್‌ಗಾಗಿ ಸಾಕಷ್ಟು ಪ್ರಯತ್ನ ನಡೆಸಲಾಯಿತು. ಆದರೆ, ಜಿಲ್ಲಾ ಆಸ್ಪತ್ರೆ ಆವರಣಲ್ಲಿರುವ ನಿಗದಿತ ಕೋವಿಡ್ ಆಸ್ಪತ್ರೆಯಲ್ಲೂ ವೆಂಟಿಲೇಟರ್ ಬೆಡ್ ಸಿಕ್ಕಿರಲಿಲ್ಲ.
ತೀವ್ರ ಉಸಿರಾಟದ ತೊಂದರೆಯಿಂದ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದ ಸೋಂಕಿತರು, ಸೋಮವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎಂದು ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ|ಕೀರ್ತಿಹಾಸ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೋವಿಡ್‌ಗೆ ಪತಿ-ಪತ್ನಿ ಬಲಿ: ಅನಾಥವಾಯ್ತು ಐದು ವರ್ಷದ ಹೆಣ್ಣುಮಗು