Advertisement

ಒಂದೇ ವರ್ಷದೊಳಗೆ ದಿಲ್ಲಿಯ ಮೂವರು ಮಾಜಿ ಸಿಎಂಗಳ ನಿಧನ!

09:19 AM Aug 08, 2019 | Hari Prasad |

ಹೊಸದಿಲ್ಲಿ: ವಿಚಿತ್ರ ಆದರೂ ನಿಜ. ಒಂದೇ ವರ್ಷದೊಳಗೆ ದಿಲ್ಲಿಯ ಮೂವರು ಮಾಜಿ ಮುಖ್ಯಮಂತ್ರಿಗಳು ಅನಿರೀಕ್ಷಿತವಾಗಿ ಮೃತಪಟ್ಟಿದ್ದಾರೆ. ಇದು ದಿಲ್ಲಿ ಪಾಲಿಗೆ ಆಘಾತ ತಂದಿದೆ.

Advertisement

ಸುಷ್ಮಾ ಸ್ವರಾಜ್‌ ಅವರು ನಿಧನರಾಗುವುದಕ್ಕೆ ಮುನ್ನ, ಕಾಂಗ್ರೆಸ್‌ ನ ಹೈಪ್ರೊಫೈಲ್ ನಾಯಕಿ, ಶೀಲಾ ದೀಕ್ಷಿತ್‌ ಅವರು ಜು.20ರಂದು ನಿಧನರಾಗಿದ್ದರು. ದಿಲ್ಲಿಯ ಮುಖ್ಯಮಂತ್ರಿ ಆಗಿ ಅವರು 1998ರಿಂದ 2013ರವರೆಗೆ ಕಾರ್ಯ ನಿರ್ವಹಿಸಿದ್ದರು.


ರಾಜ್ಯವೊಂದರ ದೀರ್ಘಕಾಲೀನ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯೂ ಶೀಲಾ ಅವರದ್ದಾಗಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಮದನ್ ಲಾಲ್ ಖುರಾನ ಅವರು ನಿಧನ ಹೊಂದಿದ್ದರು. ಖುರಾನಾ ಅವರು 1993ರಿಂದ 1996ರವರೆಗೆ ದೆಹಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು 1998 ಅಕ್ಟೋಬರ್‌ ನಿಂದ ಡಿಸೆಂಬರ್ ವರೆಗೆ ದಿಲ್ಲಿ ಮುಖ್ಯಮಂತ್ರಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next