Advertisement
ಉಳ್ಳಾಲ, ಸೋಮೇಶ್ವರ ಮತ್ತು ಉಚ್ಚಿಲದಲ್ಲಿ ಕಳೆದ ಮೂರು ದಿನಗಳಿಂದ ಎದುರಾಗಿರುವ ಕಡಲ್ಕೊರೆತ ಪ್ರದೇಶಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು. ಈ ಪ್ರದೇಶದಲ್ಲಿ ನಡೆದ ಕಡಲ್ಕೊರೆತಕ್ಕೆ ಸಂಬಂಧಿಸಿ ಬಂದರು, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಿದ್ದು, ಸಂತ್ರಸ್ತರಿಗೆ ಮೂರು ದಿನಗಳೊಳಗೆ ಪರಿಹಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕೋಟೆಕಾರಿನಲ್ಲಿ ಕಡಲ್ಕೊರೆತ ಸಂತ್ರಸ್ತರಿಗೆ ಒಂದೂವರೆ ಎಕರೆ ಜಮೀನು ಮಂಜೂರು ಮಾಡಲಾಗಿದೆ. ವಸತಿ ಸಮುತ್ಛಯ ನಿರ್ಮಿಸಿ ಅವರಿಗೆ ನೀಡುವ ಯೋಜನೆ ರೂಪಿಸಲಾಗಿತ್ತು. ಆದರೆ ಸರಕಾರದ ಯೋಜನೆಯಲ್ಲಿ ಒಂದು ಬೆಡ್ ರೂಮ್ ಮನೆಯನ್ನು ನೀಡುವ ಮಂಜೂರಾತಿಯೂ ದೊರೆತಿತ್ತು. ಅದು ಹೆಚ್ಚು ಜನರಿರುವ ಕುಟುಂಬಗಳಿಗೆ ಬಾಳಲು ಅಸಾಧ್ಯ ಎಂದು ಮತ್ತೆ ಕನಿಷ್ಠ ಎರಡು ಬೆಡ್ ರೂಮ್ ಇರುವ ಮನೆಗಳನ್ನು ನೀಡುವ ಸಲುವಾಗಿ ಪ್ರಸ್ತಾಪವನ್ನು ಸರಕಾರದ ಮುಂದೆ ಇರಿಸಲಾಗಿದೆ ಎಂದು ತಿಳಿಸಿದರು. ಈ ನಡುವೆ ಹಲವರಿಗೆ ಮಂಜೂರಾದ ಸ್ಥಳ ಮೀನುಗಾರಿಕೆ ಕೆಲಸಗಳಿಗೆ ಕಷ್ಟಕರ ಅದಕ್ಕಾಗಿ ಮುಂದೆ ಜಾಗವನ್ನು ಗುರುತಿಸುವ ಕಾರ್ಯವನ್ನು ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ತಹಶೀಲ್ದಾರ್ ಟಿ.ಜಿ. ಗುರುಪ್ರಸಾದ್, ಉಳ್ಳಾಲ ಗ್ರಾಮಕರಣಿಕರಾದ ಪ್ರಮೋದ್, ಲಾವಣ್ಯ, ಗ್ರಾಮ ಸಹಾಯಕ ನವನೀತ್ ಉಳ್ಳಾಲ, ಕಿರಿಯ ಅಭಿಯಂತರ ರೇಣುಕಾ, ಗ್ರಾಮ ಸಹಾಯಕ ಸೋಮೇಶ್ವರ ಗೋಪಾಲ್, ಕಾಂಗ್ರೆಸ್ ಮುಖಂಡರಾದ ಈಶ್ವರ ಉಳ್ಳಾಲ್, ಸದಾಶಿವ ಉಳ್ಳಾಲ್ ಸುರೇಶ್ ಭಟ್ನಗರ, ಬಶೀರ್ ತಲಪಾಡಿ ಸಲಾಂ ಕೆ.ಸಿ. ರೋಡ್, ಉಳ್ಳಾಲ ನಗರಸಭಾ ಸದಸ್ಯರಾದ ಮಹಮ್ಮದ್ ಮುಕ್ಕಚ್ಚೇರಿ, ಬಶೀರ್, ಬಾಝಿಲ್ ಡಿ’ಸೋಜಾ, ರವಿಚಂದ್ರ ಗಟ್ಟಿ, ಸ್ಥಳೀಯರಾದ ಕೈಕೋ ಮಹಮ್ಮದ್, ಹಮೀದ್ ಕಿಲೇರಿಯಾನಗರ, ಶಾಬಾನ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮನೆ ಕಳದುಕೊಂಡವರೊಂದಿಗೆ ಸಚಿವರು ಮಾತನಾಡಿದರು.