Advertisement

ಕರಾವಳಿ,ಪಶ್ಚಿಮಘಟ್ಟದಲ್ಲಿ ಮೂರು ದಿನ ಭಾರಿ ಮಳೆ

04:15 PM Jul 19, 2021 | Team Udayavani |

ಧಾರವಾಡ : ಉತ್ತರ ಕರ್ನಾಟಕದ ಜು.19 ರಿಂದ 21 ರ ಹವಾಮಾನ ಮುನ್ಸೂಚನೆ ಲಭಿಸಿದ್ದು, ಮುಂದಿನ ಮೂರು ದಿನಗಳಲ್ಲಿ ಕರಾವಳಿ/ಪಶ್ಚಿಮ ಘಟ್ಟಗಳಲ್ಲಿ ಭಾರಿ ಮಳೆ (30-75 ಮಿ.ಮೀ) ಮುಂದುವರೆಯುವ ಸಾಧ್ಯತೆ ಇದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹವಾಮಾನ ಇಲಾಖೆ ತಿಳಿಸಿದೆ.

Advertisement

ಇದಲ್ಲದೇ ಉತ್ತರ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ಸಾಧಾರಣೆ ಮಳೆ(5-25 ಮಿ.ಮೀ) ಸಾಧ್ಯತೆಯಿದ್ದು, ಹವಾಮಾನ ತಂಪಾದ ಮತ್ತು ಮೋಡಗಳಿಂದ ಕೂಡಿರುತ್ತದೆ. ಈಗಾಗಲೇ ಕಳೆದ 24 ಗಂಟೆಗಳಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಾಧಾರಣೆ (10-25 ಮಿ.ಮೀ)  ಮಳೆಯಾಗಿದ್ದು, ಉತ್ತರ ಕನ್ನಡದಲ್ಲಿ ಗರಿಷ್ಠ 44 ಮಿ.ಮೀ ಮತ್ತು ಯಾದಗಿರಿ ಜಿಲ್ಲೆಯಲ್ಲಿ 36 ಮಿ.ಮೀಯಷ್ಟು ಮಳೆ ಸುರಿದಿದೆ.

ಇದನ್ನೂ ಓದಿ: ಅಕ್ರಮ ಗಣಿಯಲ್ಲಿ ಭಾರಿ ಸ್ಫೋಟಕ್ಕೆ ಸಿದ್ಧತೆ : ಪೊಲೀಸ್ ದಾಳಿಯಿಂದ ತಪ್ಪಿದ ಅಪಾಯ

ಮೋಡಗಳಿಂದ ಆವೃತವಾಗಿ ತಂಪಾದ ಹವಾಮಾನವು ಬೆಳೆಗಳಲ್ಲಿ ಕೀಟ-ರೋಗಗಳನ್ನು ಪ್ರೋತ್ಸಾಹಿಸುವ ಕಾರಣ ಬೆಳೆಗಳ ಎಲೆಗಳು ಹಳದಿ ಲಕ್ಷಣಗಳನ್ನು ತೋರಿಸುತ್ತವೆ. ಹೀಗಾಗಿ ರೋಗ ಹಾಗೂ ಕೀಟಬಾಧೆ ನಿಯಂತ್ರಣಕ್ಕಾಗಿ ರೈತರು ಅಗತ್ಯ ಕ್ರಮ ಕೈಗೊಳ್ಳುವಂತೆ ಕೃಷಿ ವಿವಿಯ ಹವಾಮಾನ ವಿಭಾಗವು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next