Advertisement
ನಗರದ ಕೊಟೇಚಾ ಸಭಾಂಗಣದಲ್ಲಿ ಪುತ್ತಿಲ ಪರಿವಾರದ ಸಮಾಲೋಚನೆ ಸಭೆಯು ಫೆ.5ರಂದು ನಡೆಯಿತು. ಪುತ್ತಿಲ ಪರಿವಾರದ ಪರವಾಗಿ ಮಾತನಾಡಿದ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ, ಸಾಮಾನ್ಯ ಕಾರ್ಯ ಕರ್ತರಾಗಿ ಅರುಣ್‌ಕುಮಾರ್ ಬಿಜೆಪಿ ಸೇರಬೇಕು ಎನ್ನುವುದನ್ನು ಯಾವುದೇ ಕಾರ್ಯಕರ್ತರು ಒಪ್ಪುವುದಿಲ್ಲ. ಅರುಣ್ 35 ವರ್ಷಗಳಿಗೂ ಅಧಿಕ ಕಾಲದಿಂದ ಅಧಿಕಾರದ ಆಸೆ ಇಲ್ಲದೆ ಸಂಘಟನೆ, ಪಕ್ಷಕ್ಕಾಗಿ ದುಡಿದವರು. ಹಾಗಾಗಿ ಷರತ್ತು ಬದಿಗಿಟ್ಟು ಅವರಿಗೆ ಕಾರ್ಯಕರ್ತರ ಅಪೇಕ್ಷೆಯಂತೆ ಸ್ಥಾನಮಾನ ನೀಡಬೇಕು ಎಂದರು.
ಅರುಣ್ ಪುತ್ತಿಲ ಯಾರ ವಿರುದ್ಧವೂ ಅಗೌರವದಿಂದ ಮಾತನಾಡಿಲ್ಲ. ವಿಧಾನಸಭಾ ಚುನಾವಣೆ ಸಂದರ್ಭ ದಲ್ಲಿ ಯಾರು ಅಗೌರವದಿಂದ ಮಾತ ನಾಡಿದ್ದಾರೆ ಅನ್ನುವುದು ಎಲ್ಲರಿಗೂ ಗೊತ್ತಿ ರುವ ಸಂಗತಿ. ಹಾಗಾಗಿ ಅರುಣ್ ಯಾರಿಂದಲೂ ಕ್ಷಮೆ ಕೇಳಬಾರದು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಕಾರ್ಯಕರ್ತರ ಅಪೇಕ್ಷೆಗೆ ಬದ್ಧ
ಅರುಣ್ ಪುತ್ತಿಲ ಮಾತನಾಡಿ, ಪುತ್ತಿಲ ಪರಿವಾರ ಮತ್ತು ಬಿಜೆಪಿ ಒಂದಾಗುವ ನಿಟ್ಟಿನಲ್ಲಿ ಎರಡು 3 ಬಾರಿ ಮಾತುಕತೆ ನಡೆದಿತ್ತು. ರಾಜ್ಯದ ನಾಯಕರು ಮನಸ್ಸು ಮಾಡಿದ್ದರೂ ಪುತ್ತೂರಿನ ಕೆಲವರು ವಿರೋಧಿಸುತ್ತಿದ್ದಾರೆ. ಅವರಿಗೆ ನರೇಂದ್ರ ಮೋದಿ ಹಾಗೂ ದೇಶದ ಹಿತಕ್ಕಿಂತ ಗೊಂದಲವೇ ಮುಖ್ಯವಾಗಿದೆ ಎಂದರು.
Related Articles
Advertisement
ಪುತ್ತಿಲಗೆ ಎಂ.ಪಿ.ಟಿಕೆಟ್ ನೀಡಿಮುಂದಿನ ಲೋಕಸಭಾ ಚುನಾವಣೆ ಯಲ್ಲಿ ದ.ಕ. ಕ್ಷೇತ್ರದಿಂದ ಅರುಣ್ ಪುತ್ತಿಲ ಅವರಿಗೆ ಬಿಜೆಪಿ ಟಿಕೆಟ್ ನೀಡಬೇಕು. ಒಂದೊಮ್ಮೆ ಬಿಜೆಪಿ ಸೇರ್ಪಡೆಗೆ ಅವಕಾಶ ಸಿಗದಿದ್ದರೆ ಪುತ್ತಿಲ ಪರಿವಾರದ ಮೂಲಕ ಅರುಣ್ ಕುಮಾರ್ ಲೋಕಸಭಾ ಚುನಾವಣೆಯ ಕಣಕ್ಕಿಳಿಯಬೇಕು ಎಂದು ಸಭೆಯಲ್ಲಿದ್ದ ಕಾರ್ಯಕರ್ತರು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಅರುಣ್, ನಿಮ್ಮ ಅಪೇಕ್ಷೆಯಂತೆ ನಡೆದುಕೊಳ್ಳುವೆ ಎಂದು ಘೋಷಿಸಿದರು. ಯಡಿಯೂರಪ್ಪ ಪಕ್ಷ ತೊರೆಯಲಿಲ್ಲವೇ?
ಯಡಿಯೂರಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿ ಮೊದಲಾದವರು ಬಿಜೆಪಿ ತೊರೆದು ಚುನಾವಣೆಗೆ ಸ್ಪರ್ಧಿಸಿ ದ್ದರು. ಅವರಿಗೆಲ್ಲ ಮತ್ತೆ ಅವಕಾಶ ಸಿಕ್ಕಿದೆ. ಯಡಿಯೂರಪ್ಪನವರ ಪುತ್ರನಿಗೆ ರಾಜ್ಯಾಧ್ಯಕ್ಷತೆ ಸಿಕ್ಕಿದೆ. ಹಾಗಿರುವಾಗ ಅರುಣ್ ಪುತ್ತಿಲ ಮಾತ್ರ ಬರಬಾರದು ಅಂದರೆ ಏನರ್ಥ ಎಂದು ಶ್ರೀ ಕೃಷ್ಣ ಉಪಾಧ್ಯಾಯರು ಪ್ರಶ್ನಿಸಿದರು.
ಪುತ್ತಿಲ ಪರಿವಾರದ ಶಶಾಂಕ್ ಕೊಟೇಚಾ, ಪ್ರಸನ್ನ ಮಾರ್ಥ, ಉಮೇಶ್ ಕೋಡಿಬೈಲು, ಮನೀಶ್ ಕುಲಾಲ್, ಮಲ್ಲಿಕಾ ಪ್ರಸಾದ್, ಅನಿಲ್, ರಾಜೇಶ್ ಮೊದಲಾದವರಿದ್ದರು. ರವಿ ಕುಮಾರ್ ರೈ ಸ್ವಾಗತಿಸಿದರು. ನವೀನ್ ರೈ ಪಂಜಳ ನಿರೂಪಿಸಿದರು.