ಸುಚಿತ್ರ ಫಿಲಂ ಸೊಸೈಟಿ ಮತ್ತು ಸುಚಿತ್ರ ಸಿನಿಮಾ ಅಕಾಡೆಮಿ ವತಿಯಿಂದ ಆಗಸ್ಟ್ 10-12ರವರೆಗೆ, ಸಿನಿಮಾ ನಿರ್ಮಾಣ ಕಾರ್ಯಾಗಾರ ನಡೆಯುತ್ತಿದೆ. ಸಿನಿಮಾ ಚಿತ್ರಕಥೆ, ನಿರ್ದೇಶನ, ಛಾಯಾಗ್ರಹಣ ಮುಂತಾದ ಹಲವು ವಿಭಾಗಗಳ ಬಗ್ಗೆ ಮಾರ್ಗದರ್ಶನ ನೀಡಲಾಗುವುದು. ಆಸಕ್ತರು ಹೆಸರು ನೋಂದಾಯಿಸಲು ಆ. 5 ಕೊನೆಯ ದಿನವಾಗಿದ್ದು, ಸುಚಿತ್ರ ಸಂಸ್ಥೆಯ ಕಚೇರಿಯಲ್ಲಿ ಬೆಳಗ್ಗೆ 11-7ರವರೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವವರು suchitra.org ಗೆ ಭೇಟಿ ಕೊಡಿ. ವಿದ್ಯಾರ್ಥಿಗಳಿಗೆ ಮತ್ತು ಸುಚಿತ್ರ ಫಿಲಂ ಸೊಸೈಟಿ ಸದಸ್ಯರಿಗೆ ರೂ. 4000 ಹಾಗೂ ಇತರರಿಗೆ ರೂ.5000 ನೋಂದಣಿ ಶುಲ್ಕ ನಿಗದಿಸಲಾಗಿದೆ. ನಿರ್ದೇಶಕ ಬಿ. ಸುರೇಶ್, ನಿರ್ದೇಶಕ ರಾಜ್ ಬಿ ಶೆಟ್ಟಿ, ಕಲಾನಿರ್ದೇಶಕ ಜಿ. ಚೆನ್ನಕೇಶವ, ಚಿತ್ರಕಥಾ ರಚನೆಗಾರ ಎಂ.ಜಿ. ಸತ್ಯ, ನಿರ್ದೇಶಕ ಈರೇಗೌಡ, ನಿರ್ದೇಶಕಿ ಅನನ್ಯ ಕಾಸರವಳ್ಳಿ, ಛಾಯಾಗ್ರಾಹಕ ಬಾಲಾಜಿ ಮನೋಹರ, ಧ್ವನಿ ವಿನ್ಯಾಸಕ ಜೇಮಿ ಡಿಸಿಲ್ಪ, ಸಂಕಲನಕಾರ ಭರತ್ ಎಂ.ಸಿ. ಕಾರ್ಯಾಗಾರ ನಡೆಸಿಕೊಡಲಿದ್ದಾರೆ.
ಎಲ್ಲಿ?: 36, 9ನೇ ಮುಖ್ಯರಸ್ತೆ, ಬಿ.ವಿ. ಕಾರಂತ ರಸ್ತೆ, ಬನಶಂಕರಿ 2ನೇ ಹಂತ