Advertisement

ಗೋವಾ ಬೀಚ್ ನಲ್ಲಿ ಮೂರು ದಿನ ಬಾಬಾ ರಾಮದೇವ್ ಯೋಗ ಶಿಬಿರ

07:12 PM Feb 15, 2023 | Team Udayavani |

ಪಣಜಿ:  ಗೋವಾ ರಾಜ್ಯ ಸರ್ಕಾರ ರಾಜ್ಯದಲ್ಲಿ ಯೋಗ ಗುರು ರಾಮದೇವ್ ಬಾಬಾ ಅವರ  ಉಪಸ್ಥಿತಿಯಲ್ಲಿ ಮೂರು ದಿನಗಳ ಯೋಗ ಶಿಬಿರವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಿಬಿರಕ್ಕೆ ಹಾಜರಾಗುವಂತೆ ಶಿಕ್ಷಣ ಇಲಾಖೆ ಆದೇಶಿಸಿದೆ.

Advertisement

ರಾಜ್ಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ವಿಶೇಷ ಶಿಬಿರಗಳನ್ನು ನಡೆಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದ್ದು, ಬಾಬಾ ಅವರ ಮೂರು ದಿನಗಳ ಯೋಗ ಶಿಬಿರವು ಫೆಬ್ರವರಿ 18 ರಿಂದ 20 ರವರೆಗೆ ಪಣಜಿ ಸಮೀಪದ ಮಿರಾಮಾರ್ ಬೀಚ್‍ನಲ್ಲಿ ನಡೆಯಲಿದೆ. ಪ್ರತಿದಿನ ಬೆಳಗ್ಗೆ 5ರಿಂದ 7.30ರವರೆಗೆ ಯೋಗ ಶಿಬಿರ ನಡೆಯಲಿದೆ.  ಪ್ರತಿದಿನ ಬೆಳಗ್ಗೆ 4.45ಕ್ಕೆ ಶಿಬಿರದಲ್ಲಿ ರಾಮದೇವ್ ಬಾಬಾ  ಉಪಸ್ಥಿತರಿರುವರು.

ಫೆ.20ರಂದು ಸಂಜೆ 4ರಿಂದ 6ರವರೆಗೆ ರಾಜ್ಯದ ಎಲ್ಲ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ, ಪ್ರೌಢ ಹಾಗೂ ಪ್ರೌಢಶಾಲೆಗಳ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ವಿಶೇಷ ಶಿಬಿರ ನಡೆಯಲಿದೆ.

ಶಿಕ್ಷಣ ಇಲಾಖೆಯು ಎನ್‍ಎಸ್‍ಎಸ್, ಎನ್‍ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್‍ನ ಎಲ್ಲಾ ಶಿಕ್ಷಕರೊಂದಿಗೆ ಶಿಬಿರಕ್ಕೆ ಹಾಜರಾಗಲು ಮತ್ತು ಮಕ್ಕಳ ಓಡಾಟಕ್ಕೆ ಬಾಲರಥ ಶಾಲಾ ಬಸ್‍ನ್ನು ಸಾರಿಗೆಗೆ ಬಳಸಲು ಆದೇಶ ಹೊರಡಿಸಿದೆ. ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next