ಮೂಡುಬಿದಿರೆ:ನಾವು ಇಂದು ಶಿಕ್ಷಣ ಪದ್ಧತಿ ಬಗ್ಗೆ ಆಲೋಚಿಸಬೇಕಾಗಿದೆ. ನಾವು ಮಕ್ಕಳಿಗೆ ಶಿಕ್ಷಣದ ಹೊರತು ಏನನ್ನು ಕೊಡುತ್ತಿದ್ದೇವೆ. ಮೆಕಾಲೆ ಶಿಕ್ಷಣ ವ್ಯವಸ್ಥೆ ಭಾರತೀಯರಿಂದಲೇ ಜಾರಿಗೆ ಬಂದಿತು. ಇಂಗ್ಲಿಷ್ ವ್ಯಾಮೋಹ ನಮ್ಮಲ್ಲಿ ಇನ್ನೂ ಇದೆ. ನಮ್ಮದು ವ್ಯವಹಾರಿಕ ಇಂಗ್ಲಿಷ್, ಶೇಕ್ಸ್ ಪಿಯರ್ ಇಂಗ್ಲಿಷ್ ಅಲ್ಲ. ಆಂಗ್ಲಭಾಷೆಯನ್ನು ಅನ್ನದ ಭಾಷೆಯಾಗಿ ಪರಿವರ್ತಿಸಿ ಮಕ್ಕಳ ಸೃಜನಶೀಲತೆ ನಾಶವಾಗಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು.
ಅವರು ಭಾನುವಾರ ಮೂಡುಬಿದಿರೆ ಆಳ್ವಾಸ್ ನುಡಿಸಿರಿಯ ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭದ ಸಮಾಪನ ನುಡಿಗಳನ್ನಾಡಿದರು. ಇಂಗ್ಲಿಷ್ ಮೀಡಿಯಂ ಮಗು ತಾನು ಕೇಳಿದ ಕಥೆಯನ್ನು ಕಂಠಪಾಠ ಮಾಡಿ ನೂರು ಬಾರಿ ಕೇಳಿದರೂ ಕಥೆಯನ್ನು ಹಾಗೆಯೇ ಹೇಳುತ್ತದೆ. ಆದರೆ ಕನ್ನಡ ಶಾಲೆಯ ಮಗು ಹತ್ತು ಬಾರಿ ಕೇಳಿದರೆ ಹತ್ತು ರೀತಿಯ ಕಥೆ ಹೇಳುತ್ತಾನೆ. ಅದು ಸೃಜನಶೀಲತೆ ಎಂದರು.
ನಮ್ಮ ಮಕ್ಕಳ ಸೃಜನಶೀಲನೆ, ಕ್ರಿಯಾಶೀಲತೆ ನಾವೇ ಹಾಳು ಮಾಡುತ್ತಿದ್ದೇವೆ. ನಮ್ಮ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಬಗ್ಗೆ ಪಾಪ ಭಾವನೆ ಇರಬೇಕು. ನಮ್ಮ ಮಕ್ಕಳ ಶ್ರಮ ನಮ್ಮ ಭಾಷೆಗೆ ನಮ್ಮ ದೇಶಕ್ಕೆ ಸಿಗಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಡಾ.ಜಿಡಿ.ಜೋಶಿ ಮುಂಬೈ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಭಾರತಿ ವಿಷ್ಣುವರ್ಧನ್, ಎಲ್.ಬಂದೇನವಾಜ ಖಲೀಫ್ ಆಲ್ದಾಳ ಕಲಬುರಗಿ, ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಫಾದರ್ ಪ್ರಶಾಂತ್ ಮಾಡ್ತ, ಆರುವ ಕೊರಗಪ್ಪ ಶೆಟ್ಟಿ, ಡಾ.ಎವಿ ನರಸಿಂಹ ಮೂರ್ತಿ, ಡಾ.ಆರುಂಧತಿ ನಾಗ್, ಡಾ.ಕೆ.ರಮಾನಂದ ಬನಾರಿ, ಪ್ರೊ. ಹೊ.ನಾ.ರಾಘುವೇಂದ್ರ, ಮೈ.ಶ್ರೀ.ನಟರಾಜ್ ಅವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಮಲ್ಲಿಕಾ ಎಸ್ ಘಂಟಿ ವಹಿಸಿದ್ದರು. ಮುಖ್ಯ ಅಥಿತಿಗಳಗಾಗಿ ಶಾಸಕ ಎ.ಉಮಾನಾಥ್ ಕೋಟ್ಯಾನ್, ಡಾ,ಷ.ಶೆಟ್ಟರ್, ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಡಾ.ಎಂ.ಮೋಹನ್ ಆಳ್ವ ಉಪಸ್ಥಿತರಿದ್ದರು.