ಕನಕಗಿರಿ (ಕೊಪ್ಪಳ ಜಿಲ್ಲೆ): ತಾಲೂಕಿನ ನವಲಿ ಗ್ರಾಮದಲ್ಲಿ ಬುಧವಾರ ಮರಳು ದಿಬ್ಬ ಕುಸಿದು ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಪುಣೇಜೆಕೊಲಾಡ್ ಗ್ರಾಮದ ವಲಸಿಗರ ಮಕ್ಕಳಾದ ಸೋನಂ (7), ಸವಿತಾ (3) ಹಾಗೂ ಕವಿತಾ (1) ಮೃತರು.
ಈ ಮಕ್ಕಳ ಪಾಲಕರು ಕಳೆದ ಐದು ತಿಂಗಳಿನಿಂದ ನವಲಿ ಗ್ರಾಮದಲ್ಲಿ ವಾಸವಿದ್ದು, ಹಳ್ಳದ ಪಕ್ಕದಲ್ಲಿ ಮುಳ್ಳಿನ ಕಂಟಿ ಕಡಿದು ಸುಟ್ಟು ಇದ್ದಲು ಮಾಡಿ ಮಾರಾಟ ಮಾಡುತ್ತಿದ್ದರು. ಗ್ರಾಮದ ಗುರುಶಾಂತಯ್ಯ ಎಂಬುವರಿಗೆ ಸೇರಿದ ಜಮೀನಿನಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡಲಾಗಿತ್ತು. ಜಮೀನಿನಲ್ಲಿರುವ ದೊಡ್ಡ, ದೊಡ್ಡ ಗುಂಡಿಗಳಲ್ಲಿ ಮಕ್ಕಳನ್ನು ಬಿಟ್ಟು ಇವರು ಕೆಲಸ ಮಾಡುತ್ತಿದ್ದರು. ಆಟವಾಡುತ್ತಿದ್ದ ಸಂದರ್ಭ ಪಕ್ಕದ ಮರಳಿನ ದಿಬ್ಬ ದಿಢೀರ್ ಕುಸಿದು ಮಕ್ಕಳು ಮರಳಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರನ್ನು ತರಾಟೆ ತೆಗೆದುಕೊಂಡ ಗ್ರಾಮಸ್ಥರು, ದುರ್ಘಟನೆಗೆ ಮರಳು ಮಾಫಿ ಯಾವೇ ಕಾರಣ. ಮರಳು ಮಾಫಿಯಾದ ಬಗ್ಗೆ ಗೊತ್ತಿ ದ್ದರೂ ಕ್ರಮ ಕೈಗೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಕಂದಾಯ ನಿರೀಕ್ಷಕರನ್ನು ಕೂಡಲೇ ಅಮಾನತು ಮಾಡ ಬೇಕು. ಮರಳು ಮಾಫಿಯಾದಲ್ಲಿ ತೊಡಗಿರು ವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಳಿಕ, ಮಕ್ಕಳ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕನಕಗಿರಿ ಆರೋಗ್ಯ ಕೇಂದ್ರಕ್ಕೆ ಪೊಲೀಸ್ ವಾಹನದಲ್ಲಿ ಸಾಗಿಸಲಾಯಿತು. ಆಗ ಆ್ಯಂಬುಲೆನ್ಸ್‌ನಲ್ಲಿ ಮೃತದೇಹಗಳನ್ನು ಸಾಗಿಸದಿರುವ ಬಗ್ಗೆಯೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಘಟನೆ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಜಿಲ್ಲಾಧಿ ಕಾರಿಯೊಂದಿಗೆ ಚರ್ಚಿಸಿ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಲಾಗುವುದು.
-ರವಿ ಅಂಗಡಿ, ತಹಶೀಲ್ದಾರ್