Advertisement

ಮೂರು ಕೆಟ್ಟ ಗುಣ, ಒಂದು ಒಳ್ಳೆಯ ಗುಣ

06:00 AM Sep 28, 2018 | |

ಕನ್ನಡದಲ್ಲಿ “6-5 = 2′ ಚಿತ್ರ ಬಂದಿದ್ದು ಎಲ್ಲರಿಗೂ ಗೊತ್ತು. ಆ ಚಿತ್ರ ಜೋರು ಸುದ್ದಿ ಮಾಡಿದ್ದೂ ಗೊತ್ತು. ಈಗ ಅಂಥದ್ದೇ ಸಂಖ್ಯೆಯ ಶೀರ್ಷಿಕೆಯ ಚಿತ್ರವೊಂದು ಪ್ರೇಕ್ಷಕರ ಮುಂದೆ ಬರಲು ತಯಾರಾಗಿದೆ. ಅದು “- 3+1′. ಈ  ಚಿತ್ರದ ಹಾಡುಗಳನ್ನು ಹೊರತರುವ ಮೂಲಕ ತಮ್ಮ ಚಿತ್ರದ ಬಗ್ಗೆ ಹೇಳಿಕೊಳ್ಳಲೆಂದೇ ತಂಡ ಕಟ್ಟಿಕೊಂಡು ಮಾಧ್ಯಮ ಮುಂದೆ ಬಂದಿದ್ದರು ನಿರ್ದೇಶಕ ರಮೇಶ್‌ ಯಾದವ್‌. ಚಿತ್ರದಲ್ಲಿ ನಟಿಸಿ­ರುವ ಹಿರಿಯ ನಟ ರಾಮಕೃಷ್ಣ ಅವರ ಮೂಲಕ ಹಾಡುಗಳನ್ನು ಬಿಡುಗಡೆ ಮಾಡಿಸಿದ್ದು ವಿಶೇಷ.

Advertisement

ಅಂದು ನಟ ರಾಮಕೃಷ್ಣ ಅವರು ಬೇರೆಲ್ಲೋ ಹೋಗಬೇಕಿದ್ದರಿಂದ ಮೊದಲು ಮಾತಿಗಿಳಿ­ದರು. “ಇಲ್ಲಿ  “- 3+1′ ಚಿತ್ರದಲ್ಲಿ ನಾನೂ ಒಬ್ಬ ಮೈನಸ್‌ ಇದ್ದಂತೆ. ಇದೊಂದು ವಿಶಿಷ್ಟ ಕಥಾಹಂದರ. ನನ್ನ ಸಿನಿ ಪಯಣದಲ್ಲಿ ಇದೂ ಒಂದು ಹೊಸತನದ ಚಿತ್ರ. ಇಲ್ಲಿ ನಾಯಕಿಯ ತಂದೆ ಪಾತ್ರ ಮಾಡಿದ್ದೇನೆ. ಮನೆ ಕೆಲಸದ ಹುಡುಗ, ತನ್ನ ಮಗಳನ್ನು ಪ್ರೀತಿಸಿಬಿಟ್ಟರೆ ಏನಾಗಬಹುದು ಎಂಬ ಗೊಂದಲದ ತಂದೆ ಪಾತ್ರ ಮಾಡಿದ್ದೇನೆ’ ಎನ್ನುತ್ತಲೇ, ನಿರ್ದೇಶಕರ ಕೈಗೆ ಮೈಕ್‌ ಕೊಟ್ಟರು. ನಿರ್ದೇಶಕ ರಮೇಶ್‌ ಯಾದವ್‌, “ಇಲ್ಲಿ “- 3+1′. ಅಂದರೆ, ಪ್ರತಿಯೊಬ್ಬರಲ್ಲೂ ಒಳ್ಳೆಯ ಮತ್ತು ಕೆಟ್ಟ ಗುಣಗಳಿರುತ್ತವೆ. ತಾನು ಇಷ್ಟಪಟ್ಟಿದ್ದು ಸಿಗದೇ ಹೋದರೆ, ಸಹಜವಾಗಿಯೇ ಕೋಪ ಬರುತ್ತೆ. ಇಲ್ಲಿ ನಾಯಕ ಕೂಡ ನಾಯಕಿಯನ್ನು ಇಷ್ಟಪಡುತ್ತಾನೆ. ಆದರೆ, ಅವಳು ಸಿಗುವುದಿಲ್ಲ ಅಂತ ಗೊತ್ತಾದಾಗ ಅವನಲ್ಲಿ ಮೂರು ಕೆಟ್ಟ ಆಲೋಚನೆಗಳು ಮೂಡುತ್ತವೆ. ಅದು ಮೈನಸ್‌ 3. ಆದರೆ, ಅವನ ಲೈಫ್ನಲ್ಲೊಂದು ಒಳ್ಳೆಯ ಭಾವನೆ ಮೂಡುತ್ತದೆ. ಆ ಒಳ್ಳೆಯ ಭಾವನೆಯೇ ಪ್ಲಸ್‌ 1. ಉಳಿದದ್ದು ಚಿತ್ರ ನೋಡಬೇಕು’ ಎಂದು ಹೇಳಿ ಸುಮ್ಮನಾದರು ರಮೇಶ್‌ ಯಾದವ್‌.

ನಿರ್ಮಾಪಕ ಸತ್ಯನಾರಾಯಣ ಚಾರ್‌ ಅವರಿಗಿದು ಮೊದಲ ಚಿತ್ರ. ಸಿನಿಮಾ ಬಗ್ಗೆ ಹೆಚ್ಚೇನೂ ಹೇಳದೆ, ಏನೆಲ್ಲಾ ಹೇಳಬೇಕೋ ಅದೆಲ್ಲವನ್ನೂ ಹಾಳೆಯೊಂದರಲ್ಲಿ ಬರೆದು­ಕೊಂಡು ಬಂದು ಅದನ್ನು ಚಾಚೂ ತಪ್ಪದೆ ಓದಿ, ಎಲ್ಲರಿಗೊಂದು ಥ್ಯಾಂಕ್ಸ್‌ ಹೇಳಿ ಕುಳಿತರು. ಚಿತ್ರಕ್ಕೆ  “ತಿಥಿ’ ಖ್ಯಾತಿಯ ಅಭಿಷೇಕ್‌ ಹೀರೋ. “ಇದು ನನ್ನ 5ನೇ ಚಿತ್ರ. ಈ ಚಿತ್ರದ ಅನುಭವ ಮರೆಯುವಂತಿಲ್ಲ. 20 ದಿನಗಳ ಕಾಲ 

ಡ್ಯಾನ್ಸ್‌, ಫೈಟ್‌ ತರಬೇತಿ ಪಡೆದಿದ್ದೇನೆ’ ಅಂದರು ಅಭಿ. ಚಿತ್ರದಲ್ಲಿ “ತಿಥಿ’ ಖ್ಯಾತಿಯ ಸೆಂಚುರಿ ಗೌಡ ಕೂಡ ನಟಿಸಿದ್ದಾರೆ. ಎ.ಟಿ.ರವೀಶ್‌ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸಸ್ಯಾ ಚಿತ್ರಕ್ಕೆ ನಾಯಕಿಯಾಗಿದ್ದು, ಅವರಿಗಿದು ಮೊದಲ ಚಿತ್ರವಂತೆ. ಎನ್‌.ಟಿ.ಜಯರಾಮರೆಡ್ಡಿ, ಶ್ರೀನಿ­ವಾಸಲು ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next