Advertisement

BBMP Ex Corporator ಪುತ್ರ ಸೇರಿ ಮೂವರು ಅರೆಸ್ಟ್; ಅಂತಾರಾಜ್ಯ ಗಾಂಜಾ ದಂಧೆ!

07:56 PM Feb 02, 2024 | Team Udayavani |

ಬೆಂಗಳೂರು: ಅಂತಾರಾಜ್ಯ ಗಾಂಜಾ ದಂಧೆಯಲ್ಲಿ ನಿರತರಾಗಿದ್ದ ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ ಒಬ್ಬರ ಪುತ್ರ ಸೇರಿ ಮೂವರನ್ನು ಆಂಧ್ರಪ್ರದೇಶದ ಗುಂಟೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿಗಳು ಸುದ್ದಗುಂಟೆಪಾಳ್ಯ ಮಾಜಿ ಕಾರ್ಪೊರೇಟರ್ ಪುತ್ರ ಅಭಿನವ್(30), ಹೆಚ್​ಎಸ್​ಆರ್ ಬಡಾವಣೆಯ ಕಿಶೋರ್ ಪ್ರಕಾಶ್ ರೆಡ್ಡಿ(34) ಮತ್ತು ಬಾಲಾಜಿ ನಗರದ ಸುಮಂತ್ ಕುಮಾರ್ (24) ಎಂದು ತಿಳಿದು ಬಂದಿದೆ.

ಒಡಿಶಾದಲ್ಲಿ ಗಾಂಜಾ ಸಂಗ್ರಹಿಸಿ ಬೆಂಗಳೂರಿಗೆ 2 ಕಾರುಗಳಲ್ಲಿ ಸಾಗಾಟ ಮಾಡುತ್ತಿದ್ದವೇಳೆ ಕಾರ್ಯಾಚರಣೆ ನಡೆಸಿದ ಗುಂಟೂರು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.

60 ಕೆಜಿ ಗಾಂಜಾ, ಮೊಬೈಲ್ ಫೋನ್ ಗಳು, 2 ಕಾರು, 2.28 ಲಕ್ಷ ರೂ.ನಗದು ಸೇರಿದಂತೆ ಒಟ್ಟು 44 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next