ಚಿಂಚೋಳಿ: ಕುರಿಗಳು ಮತ್ತು ಅಕ್ಕಿ ಬೇಳೆ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಬಂಧಿಸಿ ವಶಪಡಿಸಿಕೊಳ್ಳಲಾಗಿದೆ ಎಂದು ಪಿಎಸ್‌ಐ ಮಂಜುನಾಥರೆಡ್ಡಿ ತಿಳಿಸಿದ್ದಾರೆ.
ತಾಲೂಕಿನ ಬೆನಕೆಪಳ್ಳಿ ಗ್ರಾಮದ ಬಂಧಿತ ಆರೋಪಿಗಳಾದ ಅನಿಲ ಹಣಮಂತ ಬ್ಯಾಡರ, ವೈಜನಾಥ ಶಿವರಾಯ ಬ್ಯಾಡರ, ಅನಿಲ ಶರಣಪ್ಪ ದೋಬಿ ಬಂಧಿಸಲಾಗಿದೆ.
ನಾಗಾಇದಲಾಯಿ ಗ್ರಾಮದಲ್ಲಿ ಕುರಿದೊಡ್ಡಿಯನ್ನು ಮುರಿದು 7 ಕುರಿಗಳನ್ನು ಕಳ್ಳತನ ಮಾಡಿದ್ದರು. ಅಲ್ಲದೇ ಬೆನಕೆಪಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೀಲಿ ಮುರಿದು 2 ಕ್ವಿಂಟಲ್ ಅಕ್ಕಿ, 64 ಕೆಜಿ ತೊಗರಿ ಬ್ಯಾಳಿ, 50 ಕೆಜಿ ಗೋಧಿ ಕಳ್ಳತನ ಮಾಡಿದ್ದರು. ಬಂಧಿತದಿಂದ ಎಲ್ಲವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಬೀದರ ಜಿಲ್ಲೆಯ ಮನ್ನಾಎಕ್ಕೆಳ್ಳಿ, ಬೇಮಳಖೇಡ ಪೊಲೀಸ್ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳಿವೆ. ಇವರ ಮೇಲೆ ಎಂಒಬಿ ಕಾರ್ಡ್ ತೆರೆಯುವುದಾಗಿ ಸಿಪಿಐ ಮಹಾಂತೇಶ ಪಾಟೀಲ ತಿಳಿಸಿದ್ದಾರೆ.
ಚಿಂಚೋಳಿ ಠಾಣೆ ಪೇದೆಗಳಾದ ಬಾಲಕೃಷ್ಣರೆಡ್ಡಿ, ಅಮೀರಲಿ, ಮಹಮ್ಮದ ಶಫಿ, ರಾಜಶೇಖರ, ನಾಗರಾಜ, ಅಶೋಕ, ಮಹಾಂತೇಶ, ಶಿವಾನಂದ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿ ಆಗಿರುವುದಕ್ಕಾಗಿ ಜಿಲ್ಲಾ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.