Advertisement

ಅಂಕೋಲಾ: ಅಡಿಕೆ ಕದ್ದ ಮೂವರು ಮಾಲು ಸಮೇತ ಬಂಧನ

10:02 PM Sep 21, 2022 | Team Udayavani |

ಅಂಕೋಲಾ: ಕಳೆದ ನಾಲ್ಕೈದು ದಿನಗಳ ಹಿಂದೆ ಡೊಂಗ್ರಿ ಗ್ರಾ.ಪಂ ವ್ಯಾಪ್ತಿಯ ಕನಕನಹಳ್ಳಿಯಲ್ಲಿ ಅಡಿಕೆ ಕದ್ದ ಮೂವರನ್ನು ಕಳ್ಳರನ್ನು ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.

Advertisement

ಡೊಂಗ್ರಿ ಹಳವಳ್ಳಿ ಮಳಲಗಾಂವ್ ನಿವಾಸಿ ಕೃಷ್ಣ ನಾಗಪ್ಪ ಸಿದ್ಧಿ (19), ರವಿಚಂದ್ರ ಸಿದ್ಧಿ (19), ಸೇರಿದಂತೆ ಇನ್ನೋರ್ವ ಬಾಲಾಪರಾಧಿ ಬಂಧಿತ ಆರೋಪಿಗಳು.

ಇವರು ಸೆ. 14 ರಂದು ಕನಕನಹಳ್ಳಿ ಮಹಾಬಲೇಶ್ವರ ನರಸಿಂಹ ಭಟ್ ಇವರ ಮನೆಯ ಅಂಗಳದಲ್ಲಿ ಮಾರಾಟ ಮಾಡುವ ಸಲುವಾಗಿ ರೆಡಿ ಮಾಡಿ, ಹಾಕಿಟ್ಟಿದ್ದ ಅಡಿಕೆ ಚೀಲಗಳ ಮೂಟೆಗಳ ರಾಶಿಯಿಂದ ಸುಮಾರು 60 ಸಾವಿರ ಮೌಲ್ಯದ 120 ಕೆ.ಜಿ. ತೂಕದ ಅಡಿಕೆ ಚೀಲಗಳನ್ನು ಕಳುವು ಮಾಡಿಕೊಂಡು ಹೋಗಿದ್ದರು.

ಬಳಿಕ ಇವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ಬೇನ್ನತ್ತಿದ್ದ ಅಂಕೋಲಾ ಸಿಪಿಐ ಸಂತೋಷ ಶೆಟ್ಟಿ ಮತ್ತು ಪಿ.ಎಸ್.ಐ. ಪ್ರವೀಣಕುಮಾರ. ಆರ್. ಮಹಾಂತೇಶ ಬಿ.ವಿ. ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ಆರೋಪಿತರಿಂದ 60 ಸಾವಿರ ಮೌಲ್ಯದ 120 ಕೆ.ಜಿ. ತೂಕದ ಅಡಿಕೆ ಚೀಲ ಮತ್ತು ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲನ್ನು ವಶಕ್ಕೆ ಪಡೆದಿದ್ದಾರೆ.

ಸಿಬ್ಬಂದಿಗಳಾದ ಸುಬ್ರಾಯ ಭಟ್, ಸಚಿನ್ ನಾಯಕ, ಪರಮೇಶ ಎಸ್. ಶೇಖರ ಸಿದ್ದಿ, ಶ್ರೀಕಾಂತ ಕಟಬರ, ಮಂಜುನಾಥ ಲಕ್ಮಾಪುರ, ಚಾಲಕ ಜಗದೀಶ ನಾಯ್ಕ ಕಾರ್ಯಾಚರಣೆಯಲ್ಲಿದ್ದರು.

Advertisement

ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬಂದಿಗಳ ಈ ಪತ್ತೆ ಕಾರ್ಯವನ್ನು ಪೊಲೀಸ ವರಿಷ್ಠಾಧಿಕಾರಿಗಳಾದ ಡಾ. ಸುಮನಾ ಡಿ. ಪೆನ್ನೇಕರ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್. ಬದ್ರಿನಾಥ, ಪೊಲೀಸ್ ಉಪಾಧೀಕ್ಷಕ ವೆಲೆಂಟೈನ್ ಡಿ’ಸೋಜಾರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next