Advertisement

ಮೂರೂವರೆ ತಾಸು ಬಿಎಸ್‌ವೈ ವಿಚಾರಣೆ ; ಅಪ್ರಾಪ್ತ ವಯಸ್ಕಳಿಗೆ ನಾನು ತೊಂದರೆ ನೀಡಿಲ್ಲ

01:02 AM Jun 18, 2024 | Team Udayavani |

ಬೆಂಗಳೂರು: ಸಹಾಯ ಕೇಳಿ ಕೊಂಡು ತಾಯಿಯ ಜತೆ ಬಂದ ಅಪ್ರಾಪ್ತ ವಯಸ್ಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೋಮವಾರ ಸಿಐಡಿಯಿಂದ ಸುದೀರ್ಘ‌ ವಿಚಾರಣೆ ಎದುರಿಸಿದರು.

Advertisement

ಅರಮನೆ ರಸ್ತೆಯ ಕಾರ್ಲಟನ್‌ ಹೌಸ್‌ ಕಟ್ಟಡದಲ್ಲಿರುವ ಸಿಐಡಿ ಕಚೇರಿಯಲ್ಲಿ ಪ್ರಕರಣದ ತನಿಖಾಧಿಕಾರಿ ಡಿವೈಎಸ್ಪಿ ಪುನೀತ್‌ ಅವರು ಬಿಎಸ್‌ವೈ ಅವರನ್ನು ಸುಮಾರು ಮೂರೂವರೆ ತಾಸು ಕಾಲ ವಿಚಾರಣೆ ನಡೆಸಿ ದರು. ಘಟನೆ ದಿನ ಮನೆಯಲ್ಲಿ ಏನಾಯಿತು, ದೂರುದಾರ ಮಹಿಳೆ, ಸಂತ್ರಸ್ತೆ ತಮಗೆ ಹೇಗೆ ಪರಿಚಯ ಸೇರಿ ಹತ್ತಾರು ಪ್ರಶ್ನೆಗಳನ್ನು ಕೇಳಿದರು.

ಅದಕ್ಕೆ ಉತ್ತರಿಸಿದ ಯಡಿಯೂರಪ್ಪ, ನನಗೂ ದೂರುದಾರ ಮಹಿಳೆ ಹಾಗೂ ಆಕೆಯ ಪುತ್ರಿಗೂ ಪರಿಚಯವಿಲ್ಲ. ನಾನು ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ಸಹಾಯ ಕೇಳಿ ನಿತ್ಯ ಹಲವು ಜನರು ಮನೆ ಬಳಿ ಬರುತ್ತಾರೆ. ಅವರನ್ನು ಮಾತನಾಡಿಸಿ ಕೈಲಾದ ಸಹಾಯ ಮಾಡುತ್ತೇವೆ. ಹಾಗೆಯೇ ಅಂದು ಮಹಿಳೆ ಹಾಗೂ ಆಕೆಯ ಮಗಳು ನಮ್ಮ ಮನೆಗೆ ಬಂದು ಸಹಾಯ ಕೇಳಿದ್ದರು. ಈ ವೇಳೆ ಅವರನ್ನು ಮನೆಯಲ್ಲಿ ಕುಳ್ಳಿರಿಸಿ ಸಮಸ್ಯೆ ಆಲಿಸಿದೆ. ಸೌಜನ್ಯದಿಂದ ಮಾತನಾಡಿ ಕಳುಹಿಸಿ ಕೊಟ್ಟೆ. ಅಪ್ರಾಪ್ತ ವಯಸ್ಕಳ ತಾಯಿ ಹೇಳಿದಂತೆ ಯಾವುದೇ ದೌರ್ಜನ್ಯ ಎಸಗಿಲ್ಲ ಎಂದು ಉತ್ತರಿಸಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.