Advertisement
ಕಡಿಯಾಳಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ರೈತರು, ಜನ ಸಾಮಾ ನ್ಯರಲ್ಲಿ ಭಯದ ವಾತಾವರಣ ಉಂಟಾಗುತ್ತದೆ. ಈಗ ಹಿಂದೂ ಗಳ ಮಠಮಂದಿರ, ರೈತರ ಜಾಗವನ್ನು ವಕ್ಫ್ ಬೋರ್ಡ್ಗೆ ನೋಂದಾಯಿಸಲಾಗುತ್ತಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ನ. 6ರಂದು ಮಣಿಪಾಲದ ಉಪೇಂದ್ರ ಪೈ ವೃತ್ತ(ಕಾಯಿನ್ ಸರ್ಕಲ್)ದಿಂದ ಪ್ರತಿಭಟನ ಜಾಥ ಆರಂಭಗೊಂಡು ಜಿಲ್ಲಾಧಿಕಾರಿ ಕಚೇರಿಯವರೆಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ. ಅದೇ ರೀತಿ ಎಲ್ಲ ತಾಲೂಕು ಕೇಂದ್ರಗಳಲ್ಲೂ ಪ್ರತಿಭಟನೆ ನಡೆಯಲಿದೆ ಎಂದರು.
Related Articles
ನ.7 ಮತ್ತು 8ರಂದು ಬಿಜೆಪಿ ಕಾರ್ಯಕರ್ತರು, ರೈತರು ಹಾಗೂ ಸಾರ್ವಜನಿಕರ ಜತೆ ಸೇರಿ ತಾಲೂಕು ಪಂಚಾಯತಿಗೆ ಗುಂಪಾಗಿ ತೆರಳಿ ಪಹಣಿ ಪರಿಶೀಲನೆ ನಡೆಸಲಿದ್ದೇವೆ. ತಾಲೂಕು, ಜಿಲ್ಲಾ ಮಟ್ಟದಿಂದಲೇ ರಾಜ್ಯ ಸರಕಾರದ ಮೇಲೆ ಒತ್ತಡ ಹೇರುವ ಎಲ್ಲ ಪ್ರಯತ್ನ ನಡೆಸಲಿದ್ದೇವೆ. ರೈತರ ಪಹಣಿಯನ್ನು ವಕ್ಫ್ಬೋರ್ಡ್ಗೆ ನೋಂದಾಯಿಸಿರುವುದನ್ನು ತತ್ಕ್ಷಣವೇ ಸರಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.
Advertisement
ರಾಜ್ಯ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ದಿನಕರ ಶೆಟ್ಟಿ ಹೆರ್ಗ, ರೇಶ್ಮಾ ಉದಯ ಶೆಟ್ಟಿ, ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.