Advertisement

ಮಾವೋ ನಂಟಿನ ಬಂಧಿತ ಮೂವರು ಗೃಹ ಬಂಧನಕ್ಕಾಗಿ ಮನೆಗೆ ರವಾನೆ

12:10 PM Aug 30, 2018 | udayavani editorial |

ಪುಣೆ/ಮುಂಬಯಿ : ಸುಪ್ರೀಂ ಕೋರ್ಟ್‌ ನಿರ್ದೇಶನದ ಪ್ರಕಾರ ಪುಣೆ ಪೊಲೀಸರು ಮಾವೋ ನಂಟು ಹೊಂದಿರುವ ಆರೋಪದ ಮೇಲೆ ನಿನ್ನೆ ತಾವು ಬಂಧಿಸಿದ್ದ ಮೂವರು ಎಡ ಪಂಥೀಯ ಮಾನವ ಹಕ್ಕು ಕಾರ್ಯಕರ್ತರನ್ನು ಇಂದು ಅವರವರ ಮನೆಗೆ ವಾಪಾಸ್‌ ಕಳುಹಿಸಿದರು. 

Advertisement

ನಿನ್ನೆ  ಬುಧವಾರ ರಾತ್ರಿಯೇ ಈ ಬಂಧಿತ ಕಾರ್ಯಕರ್ತರನ್ನು ಅವರ ಅನುಕ್ರಮ ನಗರಗಳಿಗೆ ವಾಪಸ್‌ ಕಳುಹಿಸಲಾಗಿದ್ದು ಅವರು ತಮ್ಮ ಮನೆ ತಲುಪಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪುಣೆಯ ಸಹಾಯಕ ಪೊಲೀಸ್‌ ಕಮಿಷನರ್‌ ಶಿವಾಜಿ ಪವಾರ್‌ ತಿಳಿಸಿದ್ದಾರೆ. 

ಮನೆಗೆ ಕಳುಹಿಸಲಾಗಿರುವ ಈ ಮೂವರು ಕಾರ್ಯಕರ್ತರನ್ನು ಗೃಹ ಬಂಧನದಲ್ಲಿ ಇರಿಸಲಾಗುವುದು ಎಂದವರು ತಿಳಿಸಿದರು. 

ಗೃಹ ಬಂಧನಕ್ಕಾಗಿ ಅವರವರ ಮನೆಗೆ ರವಾನಿಸಲ್ಪಟ್ಟಿರುವ ನಾಯಕರೆಂದರೆ ಹೈದರಾಬಾದಿನ ವರವರ ರಾವ್‌, ವರ್ನನ್‌ ಗೊನ್ಸಾಲ್ವಿಸ್‌ ಮತ್ತು ಅರುಣ್‌ ಫೆರೀರಾ. 

Advertisement

Udayavani is now on Telegram. Click here to join our channel and stay updated with the latest news.

Next