Advertisement

ಬೆಂಗಳೂರು: ಜ್ಯೋತಿಷಿ ಪ್ರಮೋದ್‌ ಎಂಬವರ ಕೈ, ಕಾಲು ಕಟ್ಟಿ ದರೋಡೆ ಮಾಡಿದ ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

Advertisement

ಜ್ಯೋತಿಷಿ ಪ್ರಮೋದ್‌ರ ಭಕ್ತೆ ಮೇಘನಾರಿಂದ ಸುಪಾರಿ ಪಡೆದಿದ್ದ ರಾಜು ಮತ್ತು ರಿಚರ್ಡ್‌ನನ್ನು ಈಗಾಗಲೇ ಬಂಧಿಸಲಾಗಿದೆ. ಈ ಆರೋಪಿಗಳ ಹೇಳಿಕೆ ಆಧರಿಸಿ ಆಡುಗೋಡಿಯ ವಿನಾಯಕ ನಗರದ ಸುರೇಶ್‌, ಪದಮ್‌ ಮತ್ತು ಸ್ವಿಸ್ತಿಕ್‌ನನ್ನು ಬಂಧಿಸಲಾಗಿದೆ. ಆರೋಪಿಗಳಿಂದ 22.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 64 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಐದು ತಿಂಗಳ ಹಿಂದೆ ಜ್ಯೋತಿಷ್ಯ ಕೇಳಲು ಪ್ರಮೋದ್‌ ಬಳಿ ಮೇಘನಾ ಬಂದಿದ್ದಳು. ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆಸಿಕೊಂಡು ನಂತರ ಹಣದ ಸಹಾಯ ಮಾಡುವಂತೆ ಕೇಳಿದ್ದಳು. ಸದ್ಯ ಹಣವಿಲ್ಲ ಎಂದು ಪ್ರಮೋದ್‌ ಹೇಳಿದ್ದರು. ಅದರಿಂದ ಅಸಮಾಧಾನಗೊಂಡಿದ್ದ ಮೇಘನಾ ತನ್ನ ಏರಿಯಾದ ಯುವಕರನ್ನು ಒಗ್ಗೂಡಿಸಿ ದರೋಡೆ ಮಾಡಿಸಿದ್ದಳು ಎಂದು ಪೊಲೀಸರು ಹೇಳಿದರು. ಜುಲೈ 9 ರಂದು ಕೆಂಗೇರಿ ರೈಲ್ವೆ ನಿಲ್ದಾಣ ಸಮೀಪದಲ್ಲಿರುವ ಜ್ಯೋತಿಷಿ ಪ್ರಮೋದ್‌ ಮನೆಗೆ ಏಕಾಏಕಿ ನುಗ್ಗಿದ್ದ ಆರೋಪಿಗಳು ಅವರ ಕೈ ಕಾಲು ಕಟ್ಟಿ ಹಾಕಿ 400 ಗ್ರಾಂ ಚಿನ್ನಾಭರಣ ಹಾಗೂ 5 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಜ್ಯೋತಿಷಿ ಜತೆ ಇರುವುಗಾಗಲೇ ಕೃತ್ಯ! :

ಮೇಘನಾ ಜ್ಯೋತಿಷಿ ಜತೆ ಇರುವಾಗಲೇ ಆರೋಪಿಗಳು ಏಕಾಏಕಿ ನುಗ್ಗಿ ಮೇಘನಾಳ ಕೈಕಾಲು ಕಟ್ಟಿ ಜ್ಯೋತಿಷಿ ಪ್ರಮೋದ್‌ ಥಳಿಸಿದ್ದರು. ಬಳಿಕ ಜ್ಯೋತಿಷಿಯ ಕೈ-ಕಾಲು ಕೂಡ ಕಟ್ಟಿ ಹಾಕಿ ಮನೆಯಲ್ಲಿದ್ದ 400 ಗ್ರಾಂ ಚಿನ್ನಾಭರಣ, 5 ಲಕ್ಷ ರೂ. ನಗದು ದೋಚಿದ್ದರು. ಬಳಿಕ ನಗರದ ಮನೆಯೊಂದರಲ್ಲಿ ಚಿನ್ನಾಭರಣ ಬಚ್ಚಿಟ್ಟಿದ್ದರು. ಪೊಲೀಸರು ಮುಂದೆಯೂ ಏನೂ ಗೊತ್ತಿಲ್ಲದಂತೆ ಮೇಘನಾ ನಟಿಸಿದ್ದಳು. ಬಳಿಕ ಮೇಘನಾ ಮತ್ತು ಆಕೆಯ ತಂಡ ನಾಪತ್ತೆಯಾಗಿತ್ತು ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್‌ ನಿಂಬರಗಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next