Advertisement

ಭೂಗತ ಪಾತಕಿ ವಿಕ್ಕಿಶೆಟ್ಟಿ ಹೆಸರಿನಲ್ಲಿ ಬೆದರಿಕೆ ಕರೆ 

12:43 AM Feb 28, 2019 | Team Udayavani |

ಬೆಂಗಳೂರು: ಭೂಗತ ಪಾತಕಿ ವಿಕ್ಕಿ ಶೆಟ್ಟಿ ಹೆಸರಿನಲ್ಲಿ ಇಂದಿರಾನಗರದ ಕರಾಚಿ ಬೇಕರಿಯ ವ್ಯವಸ್ಥಾಪಕನಿಗೆ ಗುಂಡಿನ ದಾಳಿಯ ಬೆದರಿಕೆ ಹಾಕಲಾಗಿದೆ. ಫೆ.25ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸುಕುಮಾರ್‌ ಅವರ ಮೊಬೈಲ್‌ ನಂಬರ್‌ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ತನ್ನನ್ನು ವಿಕ್ಕಿಶೆಟ್ಟಿ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ “ನೀವು ಕರಾಚಿ ಬೇಕರಿಯ ಮಾಲೀಕರೇ?’ ಎಂದು ಪ್ರಶ್ನಿಸಿದ್ದಾನೆ.

Advertisement

ಮಾಲೀಕರಲ್ಲ ಎಂದು ಸುಕುಮಾರ್‌ ಪ್ರತಿಕ್ರಿಯಿಸಿದಾಗ, ಕೂಡಲೇ “ನಿಮ್ಮ ಮಾಲೀಕರಿಗೆ ತಿಳಿಸು, ಮುಂದಿನ 24 ಗಂಟೆಯೊಳಗೆ ಕರಾಚಿ ಎಂಬ ಹೆಸರಿನ ನಾಮಫ‌ಲಕ ಬದಲಾಯಿಸಬೇಕು. ಇಲ್ಲವಾದರೆ ಬೇಕರಿಯನ್ನು ಧ್ವಂಸ ಮಾಡುವುದಾಗಿ ಹಿಂದಿ ಭಾಷೆಯಲ್ಲಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದರು. ಈ ಸಂಬಂಧ ಸುಕುಮಾರ್‌ ಅವರು ಫೆ.25ರಂದು ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತನಿಖೆ ಕೈಗೊಂಡಿರುವ ಪೊಲೀಸರು, ಸುಕುಮಾರ್‌ ಅವರಿಗೆ ಕರೆ ಮಾಡಿದ ವ್ಯಕ್ತಿಯ ಮಾಹಿತಿ ಒದಗಿಸುವಂತೆ ಸಿಐಡಿ ಸೈಬರ್‌ ಕ್ರೈಂ ಪೊಲೀಸರಿಗೆ ಮನವಿ ಮಾಡಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಇಂಟರ್‌ನೆಟ್‌ ಕರೆ ಮಾಡಿರುವುದು ತಿಳಿದು ಬಂದಿದೆ.

ಪಾತಕಿಗಳ ಹೆಸರಲ್ಲಿ ಕರೆ: ಕೆಲ ದಿನಗಳ ಹಿಂದಷ್ಟೇ ದಾವೂದ್‌ ಇಬ್ರಾಹಿಂ ಸಹಚರರು ಎಂದು ಹೇಳಿಕೊಂಡು ವಿವೇಕನಗರದ ರೆಸ್ಟೋರೆಂಟ್‌ ಮಾಲೀಕ ಅಶ್ವಿ‌ನಿ ಅಗರ್‌ವಾಲ್‌ ಅವರಿಗೆ ಕರೆ ಮಾಡಿದ್ದ ದುಷ್ಕರ್ಮಿಗಳು ಒಂದು ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು.ಅನಂತರ ಮತ್ತೂಬ್ಬ ಭೂಗತ ಪಾತಕಿ ರವಿ ಪೂಜಾರಿ ಹೆಸರಿನಲ್ಲಿ ವಿಜಯನಗರ ಉದ್ಯಮಿ ಕೆ.ಎನ್‌. ನಟರಾಜ್‌ ಅವರಿಗೆ ಕರೆ ಮಾಡಿರುವಅಪರಿಚಿತರು ಒಂದೂವರೆ ಕೋಟಿ ರೂ. ಕೊಡಬೇಕು ಎಂದು ಬೆದರಿಕೆ ಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next