Advertisement
1ರಿಂದ 10ನೇ ತರಗತಿವರೆಗಿನ ಸಮಗ್ರ ಪಠ್ಯ ಪರಿಷ್ಕರಣೆಗೆ ಸಂಬಂಧಿಸಿದಂತೆ ಎಂಟು ಪುಟಗಳ ಮುಖ್ಯಾಂಶಗಳುಳ್ಳ ತನ್ನ ಪೀಠಿಕೆ ಬರಹದ ಜತೆಗೆ 27 ಸಮಿತಿಗಳ ಅಧ್ಯಕ್ಷರು ನೀಡಿರುವ ವಿಸ್ತೃತ ಮಾಹಿತಿಯನ್ನೊಳಗೊಂಡ ಸಂಪೂರ್ಣಮಾಹಿತಿಯನ್ನು ಇತ್ತೀಚೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಿಗೆ ಸಲ್ಲಿಸಿರುವ ಅವರು, 8 ಪುಟಗಳ ಪೀಠಿಕಾ ಬರಹವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಬಿಟ್ಟುಹೋಗಿರುವ ಸಾಧಕರ ಬರಹವನ್ನು ಆಯಾ ತರಗತಿಯ ಅಗತ್ಯಕ್ಕನುಗುಣವಾಗಿ ಸೇರಿಸಲಾಗಿದೆ. ಉದಾಹರಣೆಗೆ ಕನ್ನಡದ ಆಸ್ತಿ ಎಂದೇ ಕರೆಯಲ್ಪಡುವ ಮಾಸ್ತಿ ವೆಂಕಟೇಶ್ ಅಯ್ಯಂಗಾರರ ಒಂದು ರಚನೆಯೂ ಕನ್ನಡ ಪಠ್ಯ ಪುಸ್ತಕಗಳಲ್ಲಿ ಇರಲಿಲ್ಲ. ಅವರ “ಯಶೋಧರ’ ನಾಟಕದ ಒಂದು ಭಾಗ ಅಳವಡಿಸಲಾಗಿದೆ. ಗೋಪಾಲಕೃಷ್ಣ ಅಡಿಗರ
ಯಾವ ರಚನೆಯೂ ಇರಲಿಲ್ಲ.
Related Articles
ಕನ್ನಡಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಹೈದರಾಬಾದ್ ಕರ್ನಾಟಕಕ್ಕೆ ಸೂಕ್ತ ಪ್ರಾತಿನಿಧ್ಯ ಇರಲಿಲ್ಲ. ಕೆಲವು ಮಾರ್ಪಾಡು ಮಾಡಿ ಸಿದ್ದಯ್ಯಪುರಾಣಿಕ, ಶಾಂತರಸ, ಸಿಂಪಿಲಿಂಗಣ್ಣ, ಚೆನ್ನಣ್ಣ ವಾಲೀಕಾರ ಮುಂತಾದವರ ರಚನೆಗಳನ್ನು ವಿವಿಧ ತರಗತಿ ಪಠ್ಯದಲ್ಲಿ ಸೇರಿಸಲಾಗಿದೆ. ಉತ್ತರ ಕರ್ನಾಟಕ ಬರಹಗಾರರೂ ಇದ್ದಾರೆ. ಅದೇ ರೀತಿ ಲಿಂಗತ್ವ ಅಸಮಾನತೆ ತಪ್ಪಿಸಲು ಕೆಲವು ಲೇಖಕಿಯರ ಬರಹಗಳನ್ನು ಅಳವಡಿಸಲಾಗಿದೆ.
Advertisement
ಚಿಕ್ಕವಯಸ್ಸಿನಲ್ಲೇ ದೇಶದ ಬಗ್ಗೆ ಅಭಿಮಾನ ಮೂಡಲಿ ಎಂಬ ಕಾರಣಕ್ಕೆ ಪ್ರೌಢಶಾಲೆಯಲ್ಲಿದ್ದ ಕುವೆಂಪು ಅವರ “ಭರತಭೂಮಿ ನಮ್ಮ ತಾಯಿ’ ಪದ್ಯವನ್ನು 7ನೇ ತರಗತಿಗೆ ಸ್ಥಳಾಂತರಿಸಲಾಗಿದೆ. ಕನ್ನಡೇತರ ಭಾಷಾ ಪಠ್ಯಗಳಲ್ಲಿ ಒಂದೆರಡಾದರೂ ಕನ್ನಡ ಸಾಹಿತ್ಯ ಪಾಠಗಳಿರಬೇಕು ಎಂಬ ಅಭಿಪ್ರಾಯಕ್ಕೆ ಬರಲಾಗಿತ್ತು. ಅದರಂತೆ ಇಂಗ್ಲೀಷ್ ಪಠ್ಯಕ್ಕೆ ವಿ.ಕೃ. ಗೋಕಾಕ್‌ರ “ದಿ ಸಾಂಗ್ ಆಫ್ ಇಂಡಿಯಾ’ ಪದ್ಯ ಸೇರಿಸಲಾಗಿದೆ ಎಂದು ಬರಗೂರು ರಾಮಚಂದ್ರಪ್ಪ ಅವರುವಿವರಣೆ ನೀಡಿದ್ದಾರೆ. ಗಣಿತ ಮತ್ತು ವಿಜ್ಞಾನ ಪಠ್ಯಗಳಿಗೆ ಬಂದ ಆಕ್ಷೇಪಗಣೆಗಳು ಕಡಿಮೆಯಾದರೂ ಸಮಿತಿಯವರು ಸಂಪೂರ್ಣ ಪರಿಶೀಲಿಸಿ ಸೂಕ್ತ ರೀತಿಯಲ್ಲಿ ಸಂಯೋಜಿಸಿದ್ದಾರೆ. ಮೂಲತತ್ವ ಗಮನ ದಲ್ಲಿಟ್ಟುಕೊಂಡು ಕೇಂದ್ರೀಯ ಶಾಲಾ ಪಠ್ಯಗಳಿಗೆ ಕಡಿಮೆ ಇಲ್ಲದಂತೆ ಪರಿಷ್ಕರಿಸಲಾಗಿದೆ ಎಂದು ಅವರು 8 ಪುಟಗಳ ಪೀಠಿಕೆಯಲ್ಲಿ ವಿವರಿಸಿದ್ದಾರೆ.