Advertisement
ಖಾಸಗಿ ವಿಡಿಯೋ ಇಟ್ಟುಕೊಂಡು 4 ಲಕ್ಷ ರೂ. ಹಣ ಪಡೆದ ಬಳಿಕ ಪುನ: ಐದು ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟ ಮಹಿಳೆಯರ ವಿರುದ್ಧ ವ್ಯಾಪಾರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ವ್ಯಾಪಾರಿ ನೀಡಿರುವ ದೂರಿನ ಅನ್ವಯರಾಷ್ಟ್ರೀಯ ಮಾನವ ಹಕ್ಕುಗಳ ವೇದಿಕೆ ಸಂಘಟನೆಯ ರಾಜ್ಯ ಮಹಿಳಾ ಅಧ್ಯಕ್ಷೆ ಎನ್ನಲಾದ ಭಾರತಿ ನಾಯಕ್, ನದಿಯಾ , ಸಾಗರ್ ಎಂಬುವರ ವಿರುದ್ಧ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
Related Articles
Advertisement
ಇದಾದ ಕೆಲವೇ ದಿನಗಳಲ್ಲಿ ಸಂಘಟನೆಯ ನಾಯಕಿ ಭಾರತಿ ನಾಯಕ್, ವ್ಯಾಪರಿಗೆ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ನದಿಯಾಗೆ 5 ಲಕ್ಷ ರೂ. ನನಗೆ 2ಲಕ್ಷ ರೂ, ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾಳೆ. ಮರ್ಯಾದೆ ಹೋಗುತ್ತದೆ ಎಂದು ಹೆದರಿಕೊಂಡು ಏಪ್ರಿಲ್‌ನಿಂದ ಜೂನ್ ತಿಂಗಳವರೆಗೆ ಹಂತ ಹಂತವಾಗಿ 4 ಲಕ್ಷ ರೂ. ನೀಡಿದ್ದಾರೆ.
ಸ್ಟಿಂಗ್ ಆಪರೇಶನ್ ಮಾಡಲು ಹೋದಾಗ ಹಲ್ಲೆ: ನಾಲ್ಕು ಲಕ್ಷ ರೂ. ಪಡೆದ ಬಳಿಕ ಸುಮ್ಮನಾಗದ ಭಾರತಿ, ಪುನಃ ಕರೆ ಮಾಡಿ 5 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಇದಕ್ಕೂ ಒಪ್ಪಿದ ವ್ಯಾಪಾರಿ, 3.50 ಲಕ್ಷ ರೂ. ನೀಡಲು ಒಪ್ಪಿಕೊಂಡಿದ್ದು, ಹಣ ತಲುಪಿಸಲು ಅ.25ರಂದು ಓರಾಯನ್ ಮಾಲ್‌ಗೆ ಬರಲು ಹೇಳಿದ್ದಳು. ಭಾರತಿ ಕಾಟದಿಂದ ಬೇಸತ್ತು ಹೋಗಿದ್ದ ವ್ಯಾಪಾರಿ,
ಆಕೆ ಹಣ ಸುಲಿಗೆ ಮಾಡುವುದನ್ನು ಆಕೆಗೆ ಗೊತ್ತಾಗದಂತೆ ರೆಕಾರ್ಡ್ ಮಾಡಲು ಮಧ್ಯಾಹ್ನ 3.30ರ ಸುಮಾರಿಗೆ ಮಾಲ್‌ನ ಫುಡ್‌ಕೋರ್ಟ್‌ಗೆ ಹೋಗಿದ್ದಾರೆ. ಈ ವೇಳೆ ಮಾತುಕತೆ ನಡೆಯುತ್ತಿರುವಾಗಲೇ ವ್ಯಾಪಾರಿ ಬಳಿ ಹಿಡನ್ ಕ್ಯಾಮೆರಾ ಇರುವುದನ್ನು ಪತ್ತೆಹಚ್ಚಿದ ಭಾರತಿ ಹಾಗೂ ಆಕೆಯ ಮಗ ಸಾಗರ್, ಆತನ ಬಳಿ ಇದ್ದ ಕ್ಯಾಮೆರಾ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪರಿಚಯವಿದೆ ಎಂದು ಧಮ್ಕಿ ಹಾಕಿದ ಭಾರತಿ: ಅಪರಿಚಿತ ನಂಬರ್‌ನಿಂದ ಕರೆ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಸಂಬಂಧ ಮಧ್ಯಸ್ಥಿಕೆ ನಡೆಸಲು ಬಂದ ಭಾರತಿನಾಯಕ್, ಪದೇ ಪದೇ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಪೊಲೀಸರಿಂದ ನಿನ್ನನ್ನು ರಕ್ಷಿಸಿದ್ದೇನೆ. ನೀನು ನನಗೆ ದೇವರಂತೆ ನೋಡಬೇಕು.ನನಗೆ ಪೊಲೀಸರು ಎಲ್ಲರೂ ಗೊತ್ತು. ಸುಮ್ಮನೆ ಆಟ ಆಡಬೇಡ ಕೊಟ್ಟ ಮಾತಿಗೆ ತಪ್ಪದೆ ನಡೆದುಕೋ ಎಂದು ಭಾರತಿನಾಯಕ್ ಬೆದರಿಕೆ ಹಾಕುತ್ತಿದ್ದರು ಎಂದು ದೂರುದಾರ ವ್ಯಾಪಾರಿ ಹೇಳಿದರು.