Advertisement

Threat: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂ*ಬ್‌ ಬೆದರಿಕೆ!

07:41 PM Oct 20, 2024 | Team Udayavani |

ಬೆಂಗಳೂರು: ಆರು ವಿಮಾನಗಳಲ್ಲಿ ಒಟ್ಟು 12 ಮಂದಿ ಬಾಂಬರ್‌ಗಳಿರುವುದಾಗಿ ಅನಾಮಧೇಯ ಟ್ವಿಟರ್‌ ಖಾತೆಯಿಂದ ಬಾಂಬ್‌ ಬೆದರಿಕೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಮಾಂಡ್‌ ಸೆಂಟರ್‌ಗೆ ಬಾಂಬ್‌ ಬೆದರಿಕೆ ಸಂದೇಶ ರವಾನೆಯಾಗಿದೆ. ಸದ್ಯ ಹುಸಿ ಬಾಂಬ್‌ ಬೆದರಿಕೆ ಸಂದೇಶ ರವಾನಿಸಿದವರ ವಿರುದ್ಧ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಇಂಡಿಗೋ ಏರ್‌ಲೈನ್ಸ್‌ನ  ಐಎಕ್ಸ್‌ 233, ಐಎಕ್ಸ್‌ 375, ಐಎಕ್ಸ್‌481, ಐಎಕ್ಸ್‌ 383, ಐಎಕ್ಸ್‌ 549, ಐಎಕ್ಸ್‌ 399 ವಿಮಾನಗಳಲ್ಲಿ ಬಾಂಬರ್‌ಗಳಿರುವುದಾಗಿ ಟ್ವೀಟ್‌ ರವಾನಿಸಲಾಗಿದೆ. ಮಂಗಳೂರು, ದುಬೈ, ತಿರುವನಂತಪುರಂ ಮಸ್ಕತ್‌ ಸೇರಿ ದೇಶದ ವಿವಿಧ ಏರ್‌ಪೋರ್ಟ್‌ಗಳಿಂದ ತೆರಳುವ ವಿಮಾನಗಳಿಗೆ ಹುಸಿ ಬಾಂಬ್‌ ಬೆದರಿಕೆ ಹಾಕಲಾಗಿದೆ. ಬೆದರಿಕೆ ಸಂದೇಶದಿಂದಾಗಿ ವಿಮಾನ ನಿಲ್ದಾಣ ಅಧಿಕಾರಿಗಳು ಅಲರ್ಟ್‌ ಆಗಿದ್ದು. ಕಳೆದ ಒಂದು ವಾರದಲ್ಲಿ ಎರಡನೇ ಬಾರಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್​ಗೆ ಹುಸಿ ಬಾಂಬ್‌ ಬೆದರಿಕೆ ಬಂದಿದೆ.

ಇಂಡಿಗೋ ಪ್ರಯಾಣಿಕರ ಪರದಾಟ
ಇಂಡಿಗೋ ಸರ್ವರ್ ಡೌನ್ ಆದ್ದರಿಂದ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರು ಪರದಾಡಿದ್ದರು.  ಕೆಂಪೇಗೌಡ ಏರ್ಪೋರ್ಟ್ ಟರ್ಮಿನಲ್ 1ರಲ್ಲಿ ಚೆಕ್ ಇನ್ ಮತ್ತು ಚೆಕ್ ಔಟ್ ಆಗಲು ನೂರಾರು ಮಂದಿ ಪ್ರಯಾಣಿಕರು ಪರದಾಡಿದರು. ಜೊತೆಗೆ ಚೆಕ್ ಇನ್ ಮತ್ತು ಚೆಕ್ ಔಟ್ ಆಗಲು ಟರ್ಮಿನಲ್ 1 ರಲ್ಲಿ ನಲ್ಲಿ ಸಾವಿರಾರು ಜನ ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲುವಂತಾಗಿತ್ತು.

ಆರು ಇಂಡಿಗೋ ಸೇರಿ ಇಪ್ಪತ್ತು ವಿಮಾನಗಳಿಗೆ ಬಾಂಬ್‌ ಬೆದರಿಕೆ: 
ಇಂಡಿಗೋದ 6 ವಿಮಾನ ಸೇರಿದಂತೆ ವಿಸ್ತಾರ, ಏರ್‌ ಇಂಡಿಯಾ ಸಂಸ್ಥೆಯ ಒಟ್ಟು 20 ವಿಮಾನಗಳಿಗೆ ಭಾನುವಾರ ಮತ್ತೆ ಬಾಂಬ್ ಬೆದರಿಕೆ ಬಂದಿದೆ.  ಈ ಬಗ್ಗೆ  ಇಂಡಿಗೋ ವಕ್ತಾರ ಮಾತನಾಡಿ ಸಂಸ್ಥೆಯ ವಿಮಾನಗಳಿಗೆ ಬೆದರಿಕೆ ಕರೆಗಳು ಬಂದಿವೆ. 6ಇ 58 (ಜೆಡ್ಡಾದಿಂದ ಮುಂಬೈ), 6ಇ  87 (ಕೋಯಿಕೋಡ್‌ನಿಂದ ದಮ್ಮಾಮ್), 6 ಇ 11 (ದೆಹಲಿಯಿಂದ ಇಸ್ತಾಂಬುಲ್), 6ಇ 17 (ಮುಂಬೈನಿಂದ ಇಸ್ತಾನ್ಬುಲ್), 6ಇ 133 (ಪುಣೆ- ಜೋಧಪುರ), ಮತ್ತು 6ಇ 112 (ಗೋವಾದಿಂದ ಅಹಮದಾಬಾದ್) ಎಂದರು. ಶನಿವಾರ ಕೂಡ ಒಂದೇ ದಿನ ಭಾರತದ 30ಕ್ಕೂ ಅಧಿಕ ವಿಮಾನಗಳಿಗೆ ಬಾಂಬ್‌ ಬೆದರಿಕೆ ಕರೆಗಳು ಬಂದಿದ್ದು, ಸಂಚಾರ ಅಸ್ತವ್ಯಸ್ತವಾಗಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next