Advertisement

ಅಮರನಾಥ ಯಾತ್ರೆ: ಸಿಆರ್‌ಪಿಎಫ್ ಬೈಕ್‌ ಸ್ಕ್ವಾಡ್‌, RF ಟ್ಯಾಗ್‌

10:57 AM Jun 26, 2018 | udayavani editorial |

ಜಮ್ಮು : 60 ದಿನಗಳ ವಾರ್ಷಿಕ ಅಮರನಾಥ ಯಾತ್ರೆಗೆ ಪಾಕ್‌ ಉಗ್ರರ ಬೆದರಿಕೆ ಇರುವ ಹಿನ್ನೆಲೆಯಲ್ಲಿ  ಯಾತ್ರಿಕರ ಸಂಪೂರ್ಣ ರಕ್ಷಣೆಗಾಗಿ ಅಭೂತಪೂರ್ವ ಭದ್ರತೆಯನ್ನು ಕೈಗೊಳ್ಳಲಾಗಿದೆ. ಈ ಬಾರಿಯ ಅಮರನಾಥ ಯಾತ್ರೆ ಇದೇ ಜೂನ್‌ 28ರಿಂದ ಆರಂಭವಾಗುತ್ತದೆ.

Advertisement

ವರದಿಗಳ ಪ್ರಕಾರ ಅಮರನಾಥ ಯಾತ್ರಿಕರ ಭದ್ರತೆಗಾಗಿ ಸಿಆರ್‌ಪಿಎಫ್ ನ ವಿಶೇಷ ಮೋಟಾರ್‌ ಬೈಕ್‌ ದಳವನ್ನು ನಿಯೋಜಿಸಲಾಗಿದೆ. ಇದರಿಂದ ಯಾತ್ರಿಕರಿಗೆ ಪೂರ್ಣ ಪ್ರಮಾಣದ ಭದ್ರತೆ ಇರುತ್ತದೆ. 

ಸಿಆರ್‌ಪಿಎಫ್ ಮೋಟಾರ್‌ ಬೈಕ್‌ ದಳವನ್ನು ಯಾತ್ರಿಕರು ಹಾಗೂ ಯಾತ್ರಾ ಮಾರ್ಗದ ಸುರಕ್ಷೆ ಮತ್ತು ಭದ್ರತೆಗೆ ಬಳಸಲಾಗುವುದು; ಅದೇ ವೇಳೆ ಯಾತ್ರಿಕರಿಗೆ ಅವಶ್ಯವಿರುವ ಪುಟಾಣಿ ಅಂಬುಲೆನ್ಸ್‌ ರೂಪದಲ್ಲಿ ಇದನ್ನು ಬಳಸಲಾಗುವುದು ಎಂದು ಸಿಆರ್‌ಪಿಎಫ್ ವಕ್ತಾರ ತಿಳಿಸಿದ್ದಾರೆ. 

ಅಮರನಾಥ ಯಾತ್ರಿಕರು ಪ್ರಯಾಣಿಸುವ ಪ್ರತೀ ಒಂದು ವಾಹನವನ್ನು ರೇಡಿಯೋ ಫ್ರೀಕ್ವೆನ್ಸಿ (RF) ಟ್ಯಾಗ್‌ ಮೂಲಕ ಅತ್ಯಂತ ನಿಕಟ ವಿಚಕ್ಷಣೆಗೆ ಒಳಪಡಿಸಲಾಗುವುದು ಎದು ವಕ್ತಾರ ಹೇಳಿದ್ದಾರೆ. 

ಸೇನೆಯೊಂದಿಗೆ ಸುರಕ್ಷಾ ಕರ್ತವ್ಯದಲ್ಲಿ ತೊಡಗಿರುವ ವಿವಿಧ ಭದ್ರತಾ ಪಡೆಗಳೊಂದಿಗೆ ಸಮನ್ವಯ ಮತ್ತು ಸಂಪರ್ಕವನ್ನು ಸಾಧಿಸಲು ಜಂಟಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

ರೇಡಿಯೋ ಫ್ರೀಕ್ವೆನ್ಸಿ ಟ್ಯಾಗ್‌ ಅಥವಾ ಆರ್‌ಎಫ್ ಅನ್ನು ಅಮರನಾಥ ಯಾತ್ರಿಕರ ಪ್ರತಿಯೊಂದು ವಾಹನಕ್ಕೆ ಅಳವಡಿಸುವ ಮೂಲಕ ಅದರ ಸಾಗುವಿಕೆಯ ಮೇಲೆ ವಿದ್ಯುನ್ಮಾನ ವ್ಯವಸ್ಥೆಯ ಮೂಲಕ ತೀವ್ರ ನಿಗಾ ಇಡಲು ಸಾಧ್ಯವಾಗುವುದು ಎಂದವರು ಹೇಳಿದರು.

ಅಮರನಾಥ ಯಾತ್ರೆಯ ಸಂಪೂರ್ಣ ಮಾರ್ಗದ ಉದ್ದಕ್ಕೂ ಹೆಚ್ಚುವರಿಯಾಗಿ 22,500 ಅರೆಸೈನಿಕ ಪಡೆ ಸಿಬಂದಿಗಳನ್ನು ಸುರಕ್ಷೆ ಮತ್ತು ಭದ್ರತೆಗಾಗಿ ನಿಯೋಜಿಸಲಾಗುವುದು ಎಂದವರು ಹೇಳಿದರು. 

ಜಮ್ಮು ಕಾಶ್ಮೀರ ಪೊಲೀಸರು, ಛಾಯಾ ಸೇನಾ ಪಡೆ, ರಾಷ್ಟ್ರೀಯ ಪ್ರಕೋಪ ಸ್ಪಂದನ ದಳ ಮತ್ತು ಸೇನೆ ಸೇರಿದಂತೆ ಒಟ್ಟು 40,000 ಭದ್ರತಾ ಸಿಬಂದಿಗಳು ಅಮರನಾಥ ಯಾತ್ರಿಕರ ಭದ್ರತೆ, ರಕ್ಷಣೆ ಮತ್ತು ಸುರಕ್ಷೆಗಾಗಿ ನಿಯೋಜನೆಗೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು.  

Advertisement

Udayavani is now on Telegram. Click here to join our channel and stay updated with the latest news.

Next