Advertisement

ಗಡ್ಕರಿ ಅವರಿಗೆ ಬೆದರಿಕೆ ಕರೆ; ಬಂಧಿತ ಜಯೇಶ್ ಪೂಜಾರಿಗೆ ಉಗ್ರ ಪಾಷಾ ಲಿಂಕ್

05:14 PM Jul 14, 2023 | Team Udayavani |

ನಾಗ್ಪುರ : ಈ ವರ್ಷದ ಆರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಜಯೇಶ್ ಪೂಜಾರಿ ಮತ್ತು ಬೆಂಗಳೂರು ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಆರೋಪಿಯಾಗಿ ಕರ್ನಾಟಕದ ಜೈಲಿನಲ್ಲಿರುವ ಅಫ್ಸರ್ ಪಾಷಾ ನಡುವೆ ಸಂಪರ್ಕವಿರುವುದು ಕಂಡು ಬಂದಿದೆ.

Advertisement

ತನಿಖೆ ವೇಳೆ ನಾಗ್ಪುರದ ಪೊಲೀಸರು ಸಂಪರ್ಕವನ್ನು ಕಂಡುಕೊಂಡಿದ್ದಾರೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ. ಪೂಜಾರಿ, ಅಲಿಯಾಸ್ ಕಾಂತ (ಶಾಕೀರ್) ಈ ಹಿಂದೆ ಪಾಷಾ ಜತೆಗೆ ಬೆಳಗಾವಿ ಜೈಲಿನಲ್ಲಿದ್ದ ಎಂದು ಅವರು ಹೇಳಿದ್ದಾರೆ.

ನಾಗ್ಪುರದಲ್ಲಿರುವ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಗೆ ಜನವರಿ 14 ರಂದು ಜಯೇಶ್ ಪೂಜಾರಿ ಬೆದರಿಕೆ ಕರೆ ಮಾಡಿ, 100 ಕೋಟಿ ರೂ.ಗೆ ಬೇಡಿಕೆ ಇಟ್ಟು, ತಾನು ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡಿದ್ದ. ಆ ಸಮಯದಲ್ಲಿ ಆತನನ್ನು ನೆರೆಯ ಕರ್ನಾಟಕದ ಜೈಲಿನಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮಾರ್ಚ್ 21 ರಂದು ಮತ್ತೊಂದು ಕರೆ ಮಾಡಿ, ಗಡ್ಕರಿ ಅವರಿಗೆ 10 ಕೋಟಿ ರೂ. ಪಾವತಿಸದಿದ್ದರೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದ. ಜಯೇಶ್ ಪೂಜಾರಿಯನ್ನು ಬಂಧಿಸಿ ಮಾರ್ಚ್ 28 ರಂದು ಬೆಳಗಾವಿಯ ಜೈಲಿನಿಂದ ನಾಗ್ಪುರಕ್ಕೆ ಕರೆತರಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next