Advertisement
ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಆ್ಯಪ್‌ಗಳ ಪಟ್ಟಿಯಲ್ಲಿ “ಥ್ರೆಡ್ಸ್’ ಕಾಣಿಸಿಕೊಂಡಿದೆ. ಇದನ್ನು “ಟೆಕ್ಸ್ಟ್ ಆಧಾರಿತ ಸಂಭಾಷಣೆ ಆ್ಯಪ್’ ಎಂದು ಹೆಸರಿಸಲಾಗಿದೆ. ಇದನ್ನು ಇನ್ಸ್‌ಸ್ಟಾಗ್ರಾಂನೊಂದಿಗೆ ಲಿಂಕ್ ಮಾಡಬಹುದಾಗಿದೆ.“ಇಂದು ನೀವು ಕಾಳಜಿ ವಹಿಸುವ ವಿಷಯಗಳಿಂದ ಹಿಡಿದು ನಾಳೆ ಟ್ರೆಂಡಿಂಗ್ ಆಗುವ ವಿಷಯಗಳವರೆಗೆ ಎಲ್ಲವನ್ನೂ ಚರ್ಚಿಸಲು ಹಾಗೂ ಸಮುದಾಯಗಳನ್ನು ಒಗ್ಗೂಡಿಸಲು ಥ್ರೆಡ್ಸ್ ವೇದಿಕೆಯಾಗಿದೆ,’ ಎಂದು ಅದರಲ್ಲಿ ವಿವರಿಸಲಾಗಿದೆ.
ಈಗಾಗಲೇ “ಥ್ರೆಡ್ಸ್’ ಕುರಿತು ಎಲಾನ್ ಮಸ್ಕ್ ಮತ್ತು ಮಾರ್ಕ್ ಜುಗರ್‌ಬುರ್ಗ್ ನಡುವೆ ಸಾಮಾಜಿಕ ಜಾಲತಾಣದಲ್ಲಿ ಒಂದು ಸುತ್ತಿನ ವಾಕ್ಸಮರ ನಡೆದಿದೆ.