Advertisement

ಮೊಳಕಾಲ್ಮೂರು: ಶೇ. 96ರಷ್ಟು ಮತ ಚಲಾವಣೆ

02:57 PM Jun 09, 2018 | Team Udayavani |

ಮೊಳಕಾಲ್ಮೂರು: ಪಟ್ಟಣದ ತಾಲೂಕು ಕಚೇರಿಯಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ ವಿಧಾನ ಪರಿಷತ್‌ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯಿತು. ಶೇ. 96.73 ರಷ್ಟು ಮತದಾನವಾಗಿದೆ.

Advertisement

ತಾಲೂಕಿನಲ್ಲಿ 245 ಮತದಾರರಿದ್ದು, 204 ಪುರುಷರು ಮತ್ತು 33 ಮಹಿಳೆಯರು ಸೇರಿದಂತೆ ಒಟ್ಟು 237 ಮತದಾರರು ಮತ ಚಲಾಯಿಸಿದರು. ಕಾಂಗ್ರೆಸ್‌ನಿಂದ ಎಂ. ರಾಮಪ್ಪ, ಬಿಜೆಪಿಯಿಂದ ವೈ.ಎ. ನಾರಾಯಣಸ್ವಾಮಿ, ಜೆಡಿಎಸ್‌ನಿಂದ ರಮೇಶ್‌ಬಾಬು, ಪಕ್ಷೇತರ ಅಭ್ಯರ್ಥಿಗಳಾಗಿ ಬಿ. ಜಯಪ್ಪ, ಕೆ.ಜಿ. ತಿಮ್ಮಾರೆಡ್ಡಿ, ಡಾ| ಕೆ. ನಾಗರಾಜ್‌, ಮಂಜುಳಾ ರಾಜಗೋಪಾಲ್‌, ರಮೇಶ್‌ಬಾಬು, ರಾಮಕೃಷ್ಣ, ಎನ್‌. ವೆಂಕಟೇಶ್‌ ಗೌಡ, ಪಿ.ಸಿ.ಲೋಕೇಶ್‌, ಪಿ. ಶಕುಂತಲಾ ಹಾಗೂ ಪಿ. ಸೋಮೇಶ್‌ ನವೋದಯ ಸೇರಿದಂತೆ ಒಟ್ಟು 14 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು.

ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಆಗಮಿಸಿ ಮತದಾನ ಮಾಡಿದರು. ಬೆಳಿಗ್ಗೆ 8 ರಿಂದ ಪ್ರಾರಂಭವಾದ ಮತದಾನ ಆರಂಭದಲ್ಲಿ ಮಂದಗತಿಯಲ್ಲಿತ್ತು. ಮಧ್ಯಾಹ್ನದ ನಂತರ ಮತದಾನ ಚುರುಕಾಯಿತು. ತಹಶೀಲ್ದಾರ್‌ ಸಯ್ಯದ್‌ ನವೀದ್‌ ಹುಸೇನ್‌ , ಮತಗಟ್ಟೆ ಅಧಿಕಾರಿ ನಾಗರಾಜ್‌, ಸಹಾಯಕ ಮತಗಟ್ಟೆ ಅಧಿಕಾರಿ ಮೂಡಲಗಿರಿಯಪ್ಪ ಇದ್ದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪಟೇಲ್‌ ಜಿ. ಪಾಪನಾಯಕ, ಜಿಪಂ ಸದಸ್ಯ ಡಾ| ಬಿ. ಯೋಗೇಶ್‌ಬಾಬು, ಜಿಪಂ ಕೆಡಿಪಿ ಸದಸ್ಯ ಎಸ್‌. ಜಯಣ್ಣ, ಸತ್ಯನಾರಾಯಣ, ಪಿ.ಎನ್‌. ಶ್ರೀನಿವಾಸಲು, ಟಿ.ಎಸ್‌. ಪಾಲಯ್ಯ, ಬಿಜೆಪಿ ಮಂಡಲಾಧ್ಯಕ್ಷ ಟಿ. ರೇವಣ್ಣ, ಪ್ರಧಾನ ಕಾರ್ಯದರ್ಶಿ ಶ್ರೀರಾಮರೆಡ್ಡಿ, ನಗರಾಧ್ಯಕ್ಷ ಶಾಂತಾರಾಂ ಬಸಾಪತಿ, ಡಾ| ಪಿ.ಎಂ. ಮಂಜುನಾಥ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಮುನ್ನಾ ಭಾಯ್‌, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಈರಮ್ಮ, ಮಂಡಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀದೇವಿ ,ಸ್ಲಂ ಮೋರ್ಚಾದ ಸಂಜೀವಪ್ಪ, ಮೋಹನ ಕನಕ , ಜೆಡಿಎಸ್‌ನಿಂದ ಜಿ.ಎಸ್‌. ಮುರಳಿಧರ ನಾಯಕ, ಜಕ್ರಿಯಾ ಹಾಗೂ ಕಾರ್ಯಕರ್ತರು ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next