Advertisement
ಬಿಳಿಕೆರೆ-ಕೆ.ಆರ್.ನಗರ ಹೆದ್ದಾರಿಯ ಮುಖ್ಯ ರಸ್ತೆ ಪಕ್ಕದಲ್ಲೇ ಇರುವ ತಾಲೂಕಿನ ಹೊಸರಾಮೇನಹಳ್ಳಿಯ ಈರಣ್ಣೇಶ್ವರಸ್ವಾಮಿ ದೇವಾಲಯದ ಬಳಿ ಮುಂಬಾಗದ ಆವರಣದಲ್ಲಿ ಒಂಭತ್ತು ಬನ್ನೀ ಮರದ ಕಂಬಗಳ ನಡುವೆ ನಿಂತಿರುವ ಶೂಲದಯ್ಯ ಎನ್ನುವ ಹೆಸರಿನಿಂದಲೂ ಕರೆಯಿಸಿಕೊಳ್ಳುವ ಈರಣ್ಣೇಶ್ವರಿಗೆ ನಾಲ್ಕು ದಿನಗಳ ಕಾಲ ಸಂಪ್ರದಾಯಬದ್ಧವಾಗಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.
Related Articles
Advertisement
ಈರಣ್ಣಸ್ವಾಮಿ ಗುಡಿಯ ಸುತ್ತ ಐದು ಗ್ರಾಮದೇವತೆ ಗುಡಿಗಳಿದ್ದು, ಇದರಲ್ಲಿ ಚೌಡೇಶ್ವರಿ, ಚಿಕ್ಮಮ್ಮತಾಯಿ, ಚಿಕ್ಕಮ್ಮ, ದಂಡಮ್ಮ, ಮಂಚಮ್ಮ ದೇವಾಲಯಗಳನ್ನೂ ದೀಪಾಲಂಕಾರಗಳಿAದ ಸಿಂಗರಿಸಿ ಪೂಜೆ ಸಲ್ಲಿಸಿದರು.
ದೀಪೋತ್ಸವ: ರಾತ್ರಿ ಒಂಭತ್ತು ಕಂಬದಯ್ಯನಿಗೆ ಮಣ್ಣಿನ ಹಣತೆಯಲ್ಲಿ ಎಳ್ಳೇಣ್ಣೆ ದೀಪ ಹಚ್ಚಿ ದೀಪೋತ್ಸವ ನೆರವೇರಿದರು. ಈ ವೇಳೆ ಸ್ಥಳೀಯ ಜಾನಪದ ಕಲಾತಂಡಗಳ ಗುಡ್ಡರ ಕುಣಿತ, ಮಾರಿ ಕುಣಿತ ಮುಂತಾದ ಕಲಾತಂಡಗಳು ಪ್ರದರ್ಶನ ನೀಡಿದ ನಂತರ ಮಾರನೆಯ ಮುಂಜಾನೆ ಹರಕೆಗೆ ಕಟ್ಟಿದ್ಚ ಬಾಳೆಗೊನೆಗಳನ್ನು ಕೆಳಗಿಳಿಸಿ ಜಾತ್ರೆಗಾಗಮಿಸಿದ್ದ ಭಕ್ತರಿಗೆ ವಿತರಿಸಿದರು.
ಹಬ್ಬಕ್ಕೆಂದು ದೂರದ ಉರುಗಳಿಂದ ಬಂದಿದ್ದ ನೆಂಟರಿಗೆ ಗ್ರಾಮದ ಮನೆಮನೆಗಳಲ್ಲಿ ಹಬ್ಬದ ಅಡುಗೆ ತಯಾರಿಸಿ ಉಣಬಡಿಸಿದರು.
ಶಾಸಕ ಜಿ.ಡಿ.ಹರೀಶ್‌ಗೌಡ ಸೇರಿದಂತೆ ಹಲವಾರು ಮುಖಂಡರು ಹಬ್ಬದಲ್ಲಿ ಬಾಗವಹಿಸಿ, ಈರಣ್ಣೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು.