Advertisement

ಸಾವಿರ ಪೌರ ಕಾರ್ಮಿಕರಿಗೆ ಸಿಂಗಾಪುರ ಭಾಗ್ಯ

03:45 AM Jun 25, 2017 | Team Udayavani |

ಬೆಂಗಳೂರು: ದೂರದ ಸಿಂಗಾಪುರದಲ್ಲಿ ಹೇಗೆ ಮ್ಯಾನ್‌ಹೋಲ್‌ ಸ್ವತ್ಛ ಮಾಡುತ್ತಾರೆ, ಆಧುನಿಕ ಪರಿಕರಗಳನ್ನು ಹೇಗೆ ಬಳಕೆ ಮಾಡುತ್ತಾರೆ ಎಂಬ ಬಗ್ಗೆ ಅಧ್ಯಯನ ಮಾಡುವ ಸಲುವಾಗಿ ರಾಜ್ಯದ ಪೌರ ಕಾರ್ಮಿಕರೇ ಅಲ್ಲಿಗೆ ತೆರಳಲಿದ್ದಾರೆ! ಎಚ್‌. ಆಂಜನೇಯ ಅವರ ಸಮಾಜ ಕಲ್ಯಾಣ ಇಲಾಖೆ ಇಂಥದ್ದೊಂದು ಭಾಗ್ಯಕ್ಕೆ ಅವಕಾಶ ನೀಡಿದ್ದು,
1000 ಪೌರ ಕಾರ್ಮಿಕರು ತಂಡ ತಂಡವಾಗಿ ಸಿಂಗಾಪುರಕ್ಕೆ ಹೋಗಲಿದ್ದಾರೆ.

Advertisement

ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಒಟ್ಟು ಒಂದು ಸಾವಿರ ಪೌರ ಕಾರ್ಮಿಕರನ್ನು ಆಯ್ಕೆ ಮಾಡಿ ಸಿಂಗಾಪುರ ಪ್ರವಾಸ ಕಳುಹಿಸಲಾಗುವುದು. ಜತೆಗೆ ಪೌರ ಕಾರ್ಮಿಕ ಸಂಘಟನೆ ಮುಖಂಡರೂ ಇರುತ್ತಾರೆ. ಇವರಿಗೆ ಮಾಹಿತಿ ಒದಗಿಸಲು ಇಲಾಖೆಯ ಕೆಲವು ಅಧಿಕಾರಿಗಳೂ ತೆರಳಲಿದ್ದಾರೆ ಎಂದು ಹೇಳಿದರು. 

ಪೌರ ಕಾರ್ಮಿಕರ ಆರೋಗ್ಯ ಮತ್ತು ಪ್ರಾಣರಕ್ಷಣೆ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರವಾಸ ಯೋಜನೆ ಜಾರಿಗೆ ತಂದಿದ್ದಾರೆ. ಪ್ರತಿ ಪೌರ ಕಾರ್ಮಿಕರ ಪ್ರವಾಸಕ್ಕೆ ಒಂದು ಲಕ್ಷ ರೂ. ವೆಚ್ಚ ಅಂದಾಜು ಮಾಡಲಾಗಿದೆ. ಸುಮಾರು 10 ಕೋಟಿ ರೂ. ಭರಿಸಲು ಸರ್ಕಾರ ಸಿದಟಛಿವಿದ್ದು, ಹೆಚ್ಚು ವೆಚ್ಚ ಮಾಡಬೇಕಾದ ಅಗತ್ಯ ಬಂದರೆ ಅದಕ್ಕೂ ಸರ್ಕಾರ ಸಿದಟಛಿವಿದೆ. ಹಣದ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. 

ಪೌರ ಕಾರ್ಮಿಕರ ಜೀವ ಉಳಿಸಲು ಈ ಕ್ರಮ: ವಿದೇಶಗಳಲ್ಲಿ ಮ್ಯಾನ್‌ಹೋಲ್‌ ಸ್ವತ್ಛತೆಗೆ ಬಳಸುವ ತಂತ್ರಜ್ಞಾನ ಅಧ್ಯಯನಕ್ಕೆ ಪೌರ ಕಾರ್ಮಿಕರನ್ನು ಪ್ರವಾಸಕ್ಕೆ ಕರೆದೊಯ್ಯಲು ಅಮೆರಿಕ, ಚೀನಾ ರಾಷ್ಟ್ರಗಳನ್ನು ಆಯ್ಕೆ ಮಾಡುವ ಉದ್ದೇಶವಿತ್ತು. ಆದರೆ, ಅಲ್ಲಿನ ಸರ್ಕಾರಗಳು ಅವಕಾಶ ನಿರಾಕರಿಸಿದ್ದರಿಂದ ಸಿಂಗಾಪುರವನ್ನು ಆಯ್ಕೆ ಮಾಡಲಾಗಿದೆ. ರಾಜ್ಯದಲ್ಲಿ ಮಲಹೊರುವ ಪದಟಛಿತಿ ಮತ್ತು ಮ್ಯಾನ್‌ಹೋಲ್‌ಗ‌ಳಿಗೆ ಪೌರ ಕಾರ್ಮಿಕರು ಇಳಿಯುವುದನ್ನು ನಿಷೇಧಿಸಿದ್ದರೂ ಮ್ಯಾನ್‌ಹೋಲ್‌ ಸ್ವತ್ಛಗೊಳಿಸಲು ಕೆಲವು ಕಡೆ ಪೌರ ಕಾರ್ಮಿಕರನ್ನು ಇಳಿಸುವ ಕೆಲಸ ನಡೆಯುತ್ತಿದೆ.

ಕೆಲವೆಡೆ ಪೌರ ಕಾರ್ಮಿಕರು ಮ್ಯಾನ್‌ಹೋಲ್‌ನಲ್ಲಿ ಉಸಿರುಗಟ್ಟಿ ಮೃತಪಟ್ಟ ಘಟನೆಗಳೂ ನಡೆಯುತ್ತಿವೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕಲು ಸಿಂಗಾಪುರ ಪ್ರವಾಸ ನೆರವಾಗಲಿದೆ ಎಂದರು.

Advertisement

ಸಿಂಗಾಪುರದಲ್ಲಿ ಮ್ಯಾನ್‌ಹೋಲ್‌ ಸ್ವತ್ಛತೆಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಲಕರಣೆಗಳನ್ನು ಬಳಸಲಾಗುತ್ತಿದೆ. ಅವುಗಳನ್ನು ಅಧ್ಯಯನ ಮಾಡುವುದರೊಂದಿಗೆ ಸ್ವತ್ಛತೆಗೆ ಬಳಸುವ ಯಂತ್ರಗಳನ್ನು ಪರಿಶೀಲಿಸಿ ಅಲ್ಲಿ ಯಾವ ರೀತಿ
ಮ್ಯಾನ್‌ಹೋಲ್‌ ಸ್ವತ್ಛತಾ ಕಾರ್ಯ ನಡೆಯುತ್ತದೆ ಎಂಬುದನ್ನು ಖುದ್ದಾಗಿ ವೀಕ್ಷಿಸಲಾಗುತ್ತದೆ. ಇದಾದ ನಂತರ ರಾಜ್ಯದಲ್ಲೂ ಅದೇ ಮಾದರಿಯ ಅತ್ಯಾಧುನಿಕ ಸ್ವತ್ಛತಾ ಪದಟಛಿತಿ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.

ಮೊದಲ ಹಂತದಲ್ಲಿ ತಲಾ 10 ಮಂದಿಯನ್ನೊಳಗೊಂಡ ಏಳು ತಂಡಗಳನ್ನು ಪ್ರವಾಸಕ್ಕೆ ಕಳುಹಿಸಲಾಗುವುದು. ಪ್ರತಿ ಜಿಲ್ಲೆಯಿಂದ 30ರಿಂದ 40 ಪೌರ ಕಾರ್ಮಿಕರನ್ನು ಇದಕ್ಕೆ ಆಯ್ಕೆ ಮಾಡಲಾಗುವುದು. ಪ್ರತಿ ನಗರ ಸ್ಥಳೀಯ ಸಂಸ್ಥೆಗಳಿಂದಲೂ ಪ್ರತಿನಿಧಿಗಳು ಇರುವಂತೆ ನೋಡಿಕೊಳ್ಳಲಾಗುವುದು ಎಂದರು.

ಮಾನವ ರಹಿತ ಯಂತ್ರಗಳ ಮೂಲಕ ಮ್ಯಾನ್‌ ಹೋಲ್‌ ಸ್ವತ್ಛಗೊಳಿಸುವ ತಂತ್ರಜ್ಞಾನದ ಬಗ್ಗೆ ನಮ್ಮ ಪೌರ ಕಾರ್ಮಿಕರಿಗೆ ಮಾಹಿತಿ ನೀಡುವುದರ ಜತೆಗೆ ಯಾರೇ ಹೇಳಿದರೂ ಮ್ಯಾನ್‌ಹೋಲ್‌ಗ‌ಳಿಗೆ ಇಳಿಯದಂತೆ ಅವರಲ್ಲಿ ಜಾಗೃತಿ ಮೂಡಿಸಲು ಈ ಪ್ರವಾಸ ನೆರವಾಗಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next