Advertisement

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

01:05 AM Apr 20, 2024 | Team Udayavani |

ಹೊಸದಿಲ್ಲಿ: ಕ್ರಿಮಿನಾಶಕ ಅಂಶ ಪತ್ತೆಯಾಗಿರುವುದರಿಂದ ಭಾರತದ ಮಸಾಲಾ ಪದಾರ್ಥ ತಯಾರಿಕ ಕಂಪೆನಿಯ ಎವರೆಸ್ಟ್‌ ಫಿಶ್‌ ಕರಿ ಮಸಾ ಲಾಕ್ಕೆ ಸಿಂಗಾ ಪುರ್‌ ನಿಷೇಧ ಹೇರಿದೆ. ಸಿಂಗಾಪುರಕ್ಕೆ ಸರಬರಾಜಾಗಿರುವ ಎವರೆಸ್ಟ್‌ ಫಿಶ್‌ ಕರಿ ಮಸಾಲಾದಲ್ಲಿ ಅನುಮತಿಗಿಂತ ಹೆಚ್ಚಿನ ಪ್ರಮಾಣದ  ethylene oxide (ಕ್ರಿಮಿನಾಶಕ) ಹೆಚ್ಚಿರುವುದರಿಂದ ಅದನ್ನು ವಾಪಸ್‌ ಪಡೆಯುವಂತೆ ಅಮದು ಕಂಪೆನಿ ಎಸ್‌ಪಿ ಮುತ್ತಯ್ಯ ಆ್ಯಂಡ್‌ ಸನ್ಸ್‌ಗೆ ಸಿಂಗಾಪುರದ ಅಹಾರ ಸಂಸ್ಥೆ (ಎಸ್‌ಎಫ್ಎ) ಸೂಚಿಸಿದೆ. ಆಹಾರ ಪದಾರ್ಥಗಳಲ್ಲಿ ಎಎ  ethylene oxide ನ್ನು ಬಳಕೆಗೆ ಅವಕಾಶವಿಲ್ಲ. ಇದನ್ನು ಕೃಷಿ ಪದಾರ್ಥಗಳಲ್ಲಿ ಸೂಕ್ಷ್ಮಜೀವಿ ಮಾಲಿನ್ಯ ತಡೆಗೆ ಬಳಸಲಾಗುತ್ತದೆ.  ethylene oxide ಬಳಕೆಯಿಂದ ತತ್‌ಕ್ಷಣಕ್ಕೆ ಹಾನಿಯಿಲ್ಲ. ಆದರೆ ದೀರ್ಘ‌ಕಾಲದ ಬಳಕೆಯಿಂದ ಸಮಸ್ಯೆ ಉದ್ಭವಿಸಬಹುದು ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next