Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಹೆಚ್ಚು ಚಾರ್ಜಿಂಗ್ ಸೆಂಟರ್ ತೆರೆಯಲು ಪ್ರೋತ್ಸಾಹಿಸ ಬೇಕು. ಈ ನಿಟ್ಟಿನಲ್ಲಿ ಇಂಧನ ಇಲಾಖೆ ವತಿಯಿಂ ದ ಜೂ.24 ರಿಂದ 30ರ ವರೆಗೂ ಒಂದು ಸಾವಿ ರಕ್ಕೂ ಹೆಚ್ಚು ಎಲೆಕ್ಟ್ರಿಕ್ ಚಾರ್ಜಿಂಗ್ ಸೆಂಟರ್‌ಗಳ ಪ್ರಾರಂಭಿಸಿ, ಮೂರುವರೆ ಸಾವಿರ ಎಲೆಕ್ಟ್ರಿಕ್ ಪ್ಲಗ್ ಗಳನ್ನು ಒದಗಿಸಲಾಗುವುದು.
Related Articles
Advertisement
ಡಿಪಿಆರ್ ಸಿದ್ಧವಾದ ನಂತರ ಒಂದು ಸಾವಿರ ವೆಗಾವ್ಯಾಟ್ ಹಸಿರು ವಿದ್ಯುತ್ ಉತ್ಪಾದನೆ ಮಾಡುವ ಗುರಿಯನ್ನು ರಾಜ್ಯ ಸರ್ಕಾರ ಈ ವರ್ಷ ಕೈಗೆತ್ತಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಎಲ್ಲ ಪೂರ್ವ ಸಿದ್ಧತೆ ತಯಾರು ಮಾಡಿಕೊಳ್ಳಲಾಗಿದೆ ಎಂದರು.
35 ಕಡೆ ಅಮೃತ ಮಹೋತ್ಸವ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಅಮೃತ ಭಾರತಿಗೆ ಕನ್ನಡ ಆರತಿ ಕಾರ್ಯಕ್ರಮ ರಾಜಾದ್ಯಂತ ನಡೆಯುತ್ತಿದೆ. ಜೂ.25ರಂದು ರಾಜ್ಯದ 35 ಕಡೆಗಳಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆ.1ರಿಂದ ವಿದ್ಯಾರ್ಥಿಗಳಲ್ಲಿ ಮತ್ತು ಯುವಕರಲ್ಲಿ ಜಾಗೃತಿ ಮೂಡಿಸಲು ರಾಜ್ಯದ ನಾಲ್ಕು ಕಡೆ ಗಳಿಂದ ರಥ ಯಾತ್ರೆ ಹೊರಡಿಸಲಾಗುತ್ತಿದೆ. ಆ.9 ರಂದು ಬೆಂಗಳೂರಿನಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಿದ್ದುಗೆ ಬುದ್ಧಿ ಹೇಳುವಷ್ಟು ದೊಡ್ಡವನಲ್ಲ: ಚಡ್ಡಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು , ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಬುದ್ಧಿ ಹೇಳುವಷ್ಟು ನಾನು ದೊಡ್ಡ ವನಲ್ಲ. ಆದರೇ, ವಿವಾದವನ್ನು ಹುಟ್ಟು ಹಾಕುತ್ತಿರುವ ಅವರ ವಿಕೃತ ಮನಸ್ಸನ್ನು ಸುಟ್ಟು ಹಾಕಬೇಕು. ಜಾತಿ – ಜಾತಿಗಳ ನಡುವೆ ವಿಷ ಬೀಜವನ್ನು ಬಿತ್ತುವ ಸಿದ್ದರಾಮಯ್ಯನವರ ಮನಸ್ಥಿತಿ ಸುಟ್ಟುಹಾಕಬೇಕಾಗಿದೆ ಎಂದರು.
ಕೀಳು ಮಟ್ಟದ ಹೇಳಿಕೆಗೆ ಕಿಡಿ: ಟಿಪ್ಪು ಸುಲ್ತಾನನ ವೈಭವೀಕರಣ ಮಾಡಿ ಹಿಂದೂಗಳ ಅವಹೇಳನ ಮಾಡುವ ಭಾವನೆಗಳನ್ನು ಸುಡಬೇಕು ಕಿರಿಯ ಶಾಸಕರು ಮತ್ತು ಕಿರಿಯ ಸಚಿವರಿಂದ ಬುದ್ಧಿಯನ್ನು ಹೇಳಿಸಿಕೊಳ್ಳುವ ಪರಿಸ್ಥಿತಿ ಸಿದ್ದರಾಮಯ್ಯ ಅವರಿಗೆ ಬರಬಾರದು. ಆರ್‌ಎಸ್‌ಎಸ್ ಪ್ರಸ್ತುತ ಇಡೀ ಜಗತ್ತನ್ನು ಮೆಚ್ಚಿಕೊಂಡಿರುವ ಸಂಸ್ಥೆಯಾಗಿದೆ. ಆರ್ ಎಸ್‌ಎಸ್ ಎಂದರೇ ತ್ಯಾಗ, ಬಲಿದಾನ, ಪ್ರಾಮಾಣಿಕತೆ ಹಾಗೂ ಸೇವೆಯಾಗಿದ್ದು, ಆ ಸಂಸ್ಥೆ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡುವುದು ಯಾವುದೇ ವ್ಯಕ್ತಿಗೆ ಶೋಭೆ ತರುವುದಿಲ್ಲ. ಈ ವಿಕೃತ ಮನಸ್ಸುಗಳನ್ನು ಸುಟ್ಟು ಹಾಕಬೇಕಾಗಿರುವುದು ಸಿದ್ದರಾಮಯ್ಯರವರ ಮೊದಲ ಆದ್ಯತೆ ಆಗಬೇಕು ಎಂದು ತಿರುಗೇಟು ನೀಡಿದರು.
ರಾಜ್ಯದಲ್ಲಿ ಒಂದು ಒಳ್ಳೆಯ ಸರ್ಕಾರ ಆಡಳಿತ ನಡೆಯುತ್ತಿರುವ ವೇಳೆ ಅಂತಹ ಆಡಳಿತದ ಕಡೆಗೆ ಜನರ ಮನಸ್ಸು ಹೋಗದಿರಲಿ ಎಂದು ವಿವಾದಗಳನ್ನು ಸೃಷ್ಟಿಸುವ ಮೂಲಕ ಕಾಂಗ್ರೆಸ್ ತನ್ನ ಅಸ್ತಿತ್ವ ತೋರಿಸುವ ಪ್ರಯತ್ನವನ್ನು ಮಾಡುತ್ತಿದೆ. ಆದರೇ ಅದು ಬಹಳ ದಿನ ನಡೆಯಲು ಸಾಧ್ಯವಿಲ್ಲ. ನಾವು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಜನಪರ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರಿ ಆದೇಶವಾಗಿ ಜನರನ್ನು ತಲಪುವ ಕೆಲಸ ಪ್ರಾರಂಭವಾಗಿದೆ. ಜನಮನದಲ್ಲಿಇರುವ ಭಾವನೆ ದೂರ ಮಾಡಲು ಕಾಂಗ್ರೆಸ್ ಮುಂದಾಗಿದೆ. ಆದರೆ, ಬಿಜೆಪಿ ಕಾರ್ಯಕರ್ತರು ಬಜೆಟ್ ಘೋಷಣೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೇವೆ ಎಂದರು. ಕಾಂಗ್ರೆಸ್‌ನಿಂದ ವಿವಾದಗಳ ಸೃಷ್ಟಿ: ಸಚಿವ
ಪಠ್ಯಪುಸ್ತಕ ಪರಿಷ್ಕರಣೆ ವಿವಾದವನ್ನು ಕಾಂಗ್ರೆಸ್‌ನವರು ಹುಟ್ಟು ಹಾಕುತ್ತಿದ್ದಾರೆ. ಎಲ್ಲಿ ಲೋಪ ದೋಷಗಳಾಗಿವೆಯೋ ಅದನ್ನ ಸರಿಪಡಿಸಿಕೊಳ್ಳಲು ಮುಕ್ತ ಮನಸ್ಸನ್ನ ಹೊಂದಿರುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯ ವರು ಸ್ಪಷ್ಟಪಡಿಸಿದ್ದಾರೆ. ಕೆಲ ಸತ್ಯಸಂಗತಿಗಳು ಕೆಲವರಿಗೆ ಕಹಿಯಾಗಿ ಕಾಣುತ್ತಿರುವುದಕ್ಕೆ ನಾವು ಏನೂ ಮಾಡುವುದಕ್ಕೆ ಆಗುವುದಿಲ್ಲ. ಹಾಗೆಯೇ ಸತ್ಯವನ್ನು ಮುಚ್ಚಿಡಲು ಕೂಡ ಸಾಧ್ಯವಿಲ್ಲ. ಇತಿಹಾಸದಲ್ಲಿ ಯಾವ ಸತ್ಯ ಸಂಗತಿಗಳನ್ನ ಮುಚ್ಚಿಡಲಾಗಿತ್ತೋ ಅದನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ. ಕೆಲ ಸಾಲುಗಳಲ್ಲಿ ಲೋಪ ದೋಷಗಳಾಗಿರಬಹುದು. ಆದರೇ ಅದನ್ನು ಸರಿಪಡಿಸುವುದಾಗಿ ಸ್ವತಃ ಮುಖ್ಯಮಂತ್ರಿಯವರೇ ಹೇಳಿದ್ದಾರೆ. ವಿವಾದಗಳು ಇಲ್ಲ ಎನ್ನುವ ಕಾರಣಕ್ಕೆ ವಿವಾದವನ್ನು ಹುಟ್ಟಿ ಹಾಕಲಾಗುತ್ತಿದೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಲೇವಡಿ ಮಾಡಿದರು.