ಗುವಾಹಟಿ: 50 ವರ್ಷಗಳಿಂದಲೂ ದೇಶಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ 1 ಸಾವಿರ ಪ್ರಕರಣಗಳು ಬಾಕಿ ಇವೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅಸ್ಸಾಂನಲ್ಲಿ ಹೇಳಿ ದ್ದಾರೆ. 25 ವರ್ಷಗಳಿಂದ 2 ಲಕ್ಷಕ್ಕೂ ಹೆಚ್ಚು ಕೇಸ್‌ಗಳು ಬಾಕಿ ಇವೆ. ಅಷ್ಟೇ ಅಲ್ಲ, ಪ್ರಸ್ತುತ ಇರುವ 90 ಲಕ್ಷ ಸಿವಿಲ್ ಪ್ರಕರಣಗಳ ಪೈಕಿ 20 ಲಕ್ಷಕ್ಕೂ ಹೆಚ್ಚು ಕೇಸ್‌ಗಳಲ್ಲಿ ಸಮನ್ಸ್ ಕೂಡ ನೀಡಿಲ್ಲ. 50 ವರ್ಷ ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸಲು ಆದ್ಯತೆ ನೀಡಬೇಕು ಎಂದು ನ್ಯಾಯಮೂರ್ತಿಗಳಿಗೆ ಸೂಚನೆ ನೀಡಿರು ವುದಾಗಿ ಗೊಗೋಯ್ ಹೇಳಿದ್ದಾರೆ.
ಕೆಲವು ವ್ಯಕ್ತಿ, ಸಮೂಹಗಳಿಂದ ವಿವಾದ
ಸಮಾಜದಲ್ಲಿ ಕೆಲವು ವ್ಯಕ್ತಿಗಳು ಜಗಳಗಂಟ ಮನಸ್ಥಿತಿ, ವ್ಯತಿರಿಕ್ತ ವರ್ತನೆ ತೋರಿ ಸುತ್ತಿದ್ದಾರೆ. ಇವರನ್ನು ನ್ಯಾಯಾಂಗ ವ್ಯವಸ್ಥೆಯು ಸೋಲಿ ಸುತ್ತದೆ ಎಂಬ ವಿಶ್ವಾಸವಿದೆ ಎಂದು ಗೊಗೋಯ್ ಹೇಳಿದ್ದಾರೆ. ಗುವಾಹಟಿ ಹೈಕೋರ್ಟ್ ಆಡಿಟೋರಿಯಂನ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇಂತಹ ವ್ಯಕ್ತಿಗಳು ಕೇವಲ ಅಪವಾದ ಎಂದರು.