Advertisement

ಹೆಬ್ರಿ; ಮನೆಯ ಹಾಲ್ ಅಗೆದಾಗ ಸಿಕ್ಕಿದೆ ನಾಗನ ಕಲ್ಲು, watch

05:30 PM Nov 19, 2018 | Sharanya Alva |

ಬ್ರಹ್ಮಾವರ: ಮನೆಯ ಒಳಗೆ ಹುದುಗಿ ಹೋಗಿದ್ದ ನಾಗದೇವರ ವಿಗ್ರಹ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಪತ್ತೆಯಾಗಿರುವುದು ಜನರಲ್ಲಿ ಕುತೂಹಲ, ಭಯಭಕ್ತಿಗೆ  ಎಡೆಮಾಡಿಕೊಟ್ಟ ಘಟನೆ ಬೆಳಕಿಗೆ ಬಂದಿದೆ.

Advertisement

ಏನಿದು ಹಿಂದಿನ ರೋಚಕ ಕಥೆ:

ಉದ್ಯಮಿ ಗಂಗಾಧರ ಶೆಟ್ಟಿ ಅವರ ವ್ಯವಹಾರ ಮುಂಬೈ ನಗರಿಯಲ್ಲಿ. ಸಾಕಷ್ಟು ಹಣ, ಹೆಸರು ಗಳಿಸಿದ್ದ ಇವರು ಮುದ್ರಾಡಿಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿದ್ದರೂ ಕೂಡಾ ಯಾರಿಗೂ ನೆಮ್ಮದಿ ಇರಲಿಲ್ಲವಾಗಿತ್ತಂತೆ. ವ್ಯವಹಾರದಲ್ಲಿ ನಷ್ಟದಿಂದ ಕಂಗೆಟ್ಟ ಶೆಟ್ಟರು ತೀರ್ಥಹಳ್ಳಿ ಅರಗ ಮೂಲದ ನಾಗರಾಜ್ ಭಟ್ ಅವರ ಮೊರೆ ಹೋಗಿದ್ದರು.

ನಾಗಾರಾಧಕ ನಾಗರಾಜ್ ಅವರು ಮನೆಯ ಒಳಗೆ ಸಮಸ್ಯೆ ಇದೆ ಎಂದಿದ್ದರು. ಅಷ್ಟೇ ಅಲ್ಲ ಮನೆಯ ಹಾಲ್ ನಲ್ಲಿ ಆರು ಅಡಿ ಆಳ ಅಗೆದರೆ ನಿಮಗೆ ನಾಗದೇವರ ಕಲ್ಲು ಸಿಗುತ್ತೆ ಎಂದು ಹೇಳಿದ್ದರು!

Advertisement

ಕೊನೆಗೆ ಅದರಂತೆ ದಿನ ನಿಗದಿ ಮಾಡಿ ನಾಗರಾಜ್ ಭಟ್ ಅವರ ಮುಂದಾಳತ್ವದಲ್ಲಿ ಮನೆಯ ಹಾಲ್ ನಲ್ಲಿ ಮಾರ್ಬಲ್ ತೆಗೆದು ಅಗೆಯಲು ಪ್ರಾರಂಭಿಸಿದ್ದರು..ಸುಮಾರು ಆರಡಿ ಆಳಕ್ಕೆ ಹೋದಾಗ ಎಲ್ಲರಿಗೂ ಅಚ್ಚರಿ, ಭಯ, ಭಕ್ತಿ ಆವರಿಸಿತ್ತು. ಹೌದು ಅಲ್ಲಿ ಪುರಾತನ ಕಾಲದ ನಾಗನ ಕಲ್ಲು ಪತ್ತೆಯಾಗಿದೆ.

ಈ ಹಿಂದೆಯೂ ಪೆರ್ಡೂರ್ ಸೇರಿದಂತೆ ಹಲವು ಕಡೆ ಮನೆಯೊಳಗೆ ಹೂತು ಹೋಗಿದ್ದ ನಾಗ ವಿಗ್ರಹ ಪತ್ತೆ ಮಾಡುವ ಮೂಲಕ ಪ್ರಸಿದ್ಧರಾಗಿದ್ದರು.

ಅಘೋರಿಗಳು ನನಗೆ ಶಕ್ತಿಯನ್ನು ಧಾರೆ ಎರೆದಿದ್ದರು. ಹೀಗಾಗಿ ನಾಗನ ಶಕ್ತಿ ಎಲ್ಲೇ ಇದ್ದರು ಅದು ನನಗೆ ಸುಪ್ತ ಮನಸ್ಸಿಗೆ ಗೋಚರವಾಗುತ್ತದೆ.ಅದೇ ರೀತಿಯಲ್ಲಿ ನಾನು ನನ್ನಲ್ಲಿ ಸಮಸ್ಯೆ ಕೇಳಲು ಬಂದವರಿಗೆ ಮಾಹಿತಿ ನೀಡುತ್ತೇನೆ ಎಂದು ನಾಗರಾಜ್ ಭಟ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next