ಅಮ್ಮ ಅಂದರೆ ಹಾಗೆ ಪದಗಳಿಗೂ ಸಿಗದ ಕವಿತೆ, ವರ್ಣನೆಗೂ ಎಟುಕದ ಕಾವ್ಯ. ನಾನು ಕಂಡ ಪ್ರತ್ಯಕ್ಷ ದೇವತೆ ಎಡಬಿಡದೆ ಬಿಡುವಿಲ್ಲದೆ ದುಡಿಯುವ ತ್ಯಾಗಮಯಿ ಸಹನೆಗೆ ಪರಿಶ್ರಮ ವಾತ್ಸಲ್ಯಕ್ಕೆ ಪ್ರತಿ ರೂಪ ನನ್ನಮ್ಮ. ಅವರಿಗಾಗಿ ನಾ ಕೊಟ್ಟ ಮೊದಲ ಅತ್ಯಮೂಲ್ಯ ಉಡುಗೊರೆ ಎಂದರೆ ನಾ ಹುಟ್ಟಿದ ದಿನವೇ ಇರಬೇಕು. ಹೆಣ್ಣು ಮಗು ಬೇಕೆಂಬ ಬಯಕೆಯ ಕುಡಿಯಾಗಿ ನನ್ನಮ್ಮ ಎಂಬ ದೇವತೆಯ ಮಡಿಲ ತುಂಬಿದೆ ಅಂದು ಆಕೆಯ ಖುಷಿಗೆ ಪಾರವೇ ಇಲ್ಲ ಅನಿಸುತ್ತೆ.
ನನ್ನಮ್ಮನ ಕೈ ರುಚಿಯ ಬಗ್ಗೆ ಹೇಳಲೇಬೇಕು ಎಲ್ಲಮ್ಮಂದಿರು ಅಡುಗೆಯಲ್ಲಿ ಅತ್ಯದ್ಭುತ ಕಲೆಗಾರರು.ಅದರಲ್ಲೂ ನನ್ನಮ್ಮ ಮಾಡುವ ರೊಟ್ಟಿ ಜೊತೆಗೆ ಹುಚ್ಚೆಳ್ಳು ಚಟ್ನಿ, ಉಪ್ಪೆಸರು ಖಾರ ಆಹಾ….. ವರ್ಣಿಸಲು ಅಸಾಧ್ಯ. ಅವರು ಏನೇ ಮಾಡಿದರು ಚಂದ ಹೆಸರಿಲ್ಲದ ಸಾಂಬಾರಿನಲ್ಲಿಯೂ ಕೂಡ ರುಚಿಯ ಮಹಾಸ್ವಾದ ಇರುತ್ತದೆ.
ಅಮ್ಮನ ಕೈ ರುಚಿನೇ ಹಾಗೆ ಪ್ರಪಂಚದ ಮೇಲೆ ಮೆರೆಸುವ ಶಕ್ತಿ ಹೊಂದಿದೆ ಮಾತಿನ ಚೌಕ ಚೌಕ್ಯತೆ, ಸಮಸ್ಯೆಗಳನ್ನು ಎದುರಿಸುವ ಧೈರ್ಯ ಸತ್ಯ ಪ್ರಾಮಾಣಿಕತೆ ಇವೆಲ್ಲ ಕೇಳದೆ ನನ್ನಮ್ಮ ನನಗಾಗಿ ಕೊಟ್ಟ ಬೆಲೆ ಕಟ್ಟಲಾಗದ ಉಡುಗೊರೆಯಲ್ಲವೇ? ಮತ್ತೆ ಮರುಜನವ ಅಂತ ಇದ್ದರೆ ಈ ಮಹಾತಾಯಿಗೆ ಮಗಳಾಗಿ ಅಲ್ಲದಿದ್ದರೂ ಅವರ ಪಾದದೂಳಿನ ಕಣವಾದರೂ ನಾನು ಧನ್ಯ.
ಅಮ್ಮ, ಅಮ್ಮಾ ನಂಗೆ ನೀನು ಬೇಕಮ್ಮ! ನೀವೇ ನನಗೆಲ್ಲವೂ ಅಮ್ಮ!
ಇಂದಿಗೂ ನನ್ನಮ್ಮ ತೋಳಲ್ಲಿ ಮತ್ತೆ ಮಗುವಾಗಬೇಕೆನಿಸಿದೆ. ಅವಳ ಮಡಿಲೇರಿ ಕುಣಿಯಬೇಕು ಅನಿಸಿದೆ. ಅವರ ಕೋಪಕ್ಕೆ ಅಡಗಿ ಕೂರಬೇಕೆನಿಸಿದೆ ನನ್ನ ಹಳೆಯದ ನನ್ನ ಹೊತ್ತು ಲೋಕ ಸುಟ್ಟಬೇಕೆನಿಸಿದೆ. ಬದುಕಿನ ಪಾಠವನ್ನು ನಗುನಗುತ್ತಾ ಬೆತ್ತದ ಏಟಿನ ಜೊತೆಗೆ ಕಲಿಸಿದ ಮಹಾಗುರು ಜೀವನದ ಎಷ್ಟೋ ಸೂಕ್ಷ್ಮಗಳನ್ನು ಅರ್ಥೈಸಿದ ಸಾದ್ವಿ ನನ್ನಮ್ಮ.
ಅಮ್ಮ ಎಂಬ ಎರಡಕ್ಷರ ಕಂದನ ನೋವಿಗೆ ಔಷಧಿ ಮುತ್ತಿನ ಹಿರಿಮೆ ಜೊತೆಗೆ ಗತ್ತಿನ ಜೀವನದ ಗುರಿಯನ್ನು ಮುಡಿಗೈರಿಸಿದ ಅಮ್ಮನ ರೂಪ ದ ಆ ದೇವತೆಯ ಮನದಲ್ಲಿ ಬದುಕಿನಲ್ಲಿ ಆಯುಷ್ಯ ಆರೋಗ್ಯ ನೆಮ್ಮದಿ ಸದಾ ಹಸಿರಾಗಿರಲಿ…
ನಿಮ್ಮನ್ನು ಪ್ರೀತಿಗಿಂತ ಹೆಚ್ಚು ಆರಾಧಿಸುತ್ತಾ.. ಪೂಜಿಸುತ್ತಾ.. ನಿಮ್ಮ ಒಳಿತು ಕೆಡುಕುಗಳಿಗೆ ಹೆಗಲಾಗಿ ಸದಾ ನಿಮ್ಮೊಂದಿಗೆ ನಿಮ್ಮ ಈ ಮಗಳು. ಅಮ್ಮನಾದಾಗಲೇ ಬದುಕಿನಾಸೆ ಇನ್ನಷ್ಟು ದಟ್ಟವಾಗಿತ್ತು! ವನನ್ನ ಪಾಲಿಗೆ ಬೆಲೆ ಕಟ್ಟಲಾಗದ ಬಂಗಾರವೂ ಇವಳೇ.. ಭರವಸೆಯ ಬೆಳಕು ಇವಳೇ.. ನನ್ನ ಪುಟ್ಟ ಜಗತ್ತಿನ ಅದ್ಭುತ ಶಕ್ತಿಯಾದ ನನ್ನಮ್ಮಕೋಟಿ ಕೋಟಿ ನಮನಗಳು…
-ಅರ್ಚನಾ ಹೆಗಡೆ
ಎಂಇಎಸ್ ಮಹಾವಿದ್ಯಾಲಯ ಶಿರಸಿ