Advertisement
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ವಿಶ್ವ ಜಿಗೀಷದ್ ಯಾಗದ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಯಾಗದ ಬಗ್ಗೆ ಅವರು ವಿಶೇಷ ಮಾಹಿತಿ ನೀಡಿದರು. ಯಾಗವನ್ನು ಹೈಹಯ ಮಹಾರಾಜ ಮೊದಲು ಮಾಡಿದನು. ಯಾಗ ಪ್ರಕ್ರಿಯೆಯಲ್ಲಿ ಹಲವಾರು ದೋಷಗಳು ನುಸುಳಿದ ಕಾರಣ ಸಂಕಲ್ಪ ಸಿದ್ಧಿಸಲಿಲ್ಲ, ಯಾಗಾನುಷ್ಠಾನದ ಫಲ ಅವನಿಗೆ ಪ್ರಾಪ್ತವಾಗದೇ ಅವನ ಮಗನಾದ ಕೃತವೀರ್ಯನಿಗೆ ಪ್ರಾಪ್ತವಾಯಿತು. ಅವನ ಮಗನೇ ಲೋಕ ಪ್ರಸಿದ್ಧನಾದ ಕಾರ್ತವೀರ್ಯ, ತ್ರೇತೆಯಲ್ಲಿ ವಿಜಿಗೀಷು ಚಕ್ರವರ್ತಿಯು ಈ ಯಾಗವನ್ನು ಕೈಗೊಂಡರು. ಅವನ ಮೊಮ್ಮಗ ಅಜ, ಅಜನ ಮಗ ದಶರಥ, ದಶರಥನ ಮಗನೇ ಶ್ರೀರಾಮನಿಂದ ಯಾಗ ಪ್ರಕ್ರಿಯೆ ಮುಂದುವರಿಯಿತು ಎಂದು ವಿವರಿಸಿದರು.
ವಿಶ್ವ ಜಿಗೀಷದ್ ಯಾಗದಲ್ಲಿ ಪೂರ್ಣಾಹುತಿಯನ್ನು ನೀಡಲು ಜನಪ್ರತಿನಿಧಿಗಳು ಭಾಗವಹಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯರಾದ ಗೀತಾಂಜಲಿ ಸುವರ್ಣ, ವಿನೋದ್ ಕುಮಾರ್ ಬೊಳ್ಳೂರು, ಮನಪಾ ಸದಸ್ಯ ಗಣೇಶ್ ಹೊಸಬೆಟ್ಟು, ಮಾಜಿ ಮೇಯರ್ ರಜನಿ ದುಗ್ಗಣ್ಣ, ಗ್ರಾಮ ಪಂಚಾಯತ್ ಸದಸ್ಯರಾದ ವಿನೋದ್ ಸಾಲ್ಯಾನ್ ಬೆಳ್ಳಾಯರು, ಉಮೇಶ್ ಪೂಜಾರಿ ಪಡುಪಣಂಬೂರು, ಕುಸುಮಾ ಚಂದ್ರಶೇಖರ್, ಪುಷ್ಪಾ, ಹೇಮಂತ್ ಅಮೀನ್, ದಿನೇಶ್ ಕುಲಾಲ್, ಇತರರಾದ ಉಮಾನಾಥ ಕೋಟ್ಯಾನ್, ಮೀರಾ ಬಾೖ ಮೊದಲಾದವರು ಪ್ರಥಮ ದಿನದ ಯಾಗದಲ್ಲಿ ಪಾಲ್ಗೊಂಡರು.