Advertisement

ನಾಡಗೀತೆಯ ಅವಧಿ ಕಡಿತಕ್ಕೆ ಚಿಂತನೆ: ಸಚಿವ ಅರವಿಂದ ಲಿಂಬಾವಳಿ

03:12 PM Mar 14, 2021 | Team Udayavani |

ಮುಂಡರಗಿ (ಗದಗ): ನಾಡಗೀತೆಯನ್ನು ಪುನರ್ ಪರಿಶೀಲನೆ ಮಾಡಿ, ನಾಡಗೀತೆ ಅವಧಿ ಕಡಿತಕ್ಕೆ ಚಿಂತನೆ ನಡೆಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

Advertisement

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿರುವ ನಾಡಗೀತೆ ಅರ್ಥಪೂರ್ಣ ಮತ್ತು ಸುದೀರ್ಘವಾಗಿದೆ. ಸುದೀರ್ಘವಾಗಿರುವ ಹಾಡನ್ನು ಗರಿಷ್ಠ 2.30 ನಿಮಿಷಕ್ಕೆ ಮಿತಿಗೊಳಿಸಬೇಕಿದೆ. ಈ ಮೂಲಕ ನಾಡಗೀತೆ ವೇಳೆ ಹಿರಿಯ ನಾಗರಿಕರು, ಸಾಮಾನ್ಯ ಜನರಿಂದ ಆಗುವ ಶಿಷ್ಟಾಚಾರ ಉಲ್ಲಂಘನೆ ತಡೆಯಬಹುದು ಇದರ ಮುಖ್ಯ ಉದ್ದೇಶ ಎಂದರು.

ಇದನ್ನೂ ಓದಿ:ಹೆಚ್ಚುತ್ತಿದೆ ಕೋವಿಡ್ ಪ್ರಕರಣಗಳು: ನೈಟ್ ಕರ್ಫ್ಯೂ ಜಾರಿ ಬಗ್ಗೆ ಮಾಹಿತಿ ನೀಡಿದ ಬೊಮ್ಮಾಯಿ

ಈ ನಿಟ್ಟಿನಲ್ಲಿ ವಿಧಾನಸಭಾ ಸಭಾಧ್ಯಕ್ಷ ಹಾಗೂ ಮಾಜಿ ಶಿಕ್ಷಣ ಸಚಿವರೂ ಆದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮಾರ್ಗದರ್ಶನದಲ್ಲಿ ಸಾಹಿತಿಗಳು, ವಿಷಯ ತಜ್ಞರ ಸಭೆ ಕರೆದು, ಈ ಬಗ್ಗೆ ಪರಾಮರ್ಶಿಸಲಾಗುತ್ತದೆ. ಗೀತೆಯ ಯಾವ ಭಾಗದಲ್ಲಿ ಯಾವ ಪದಗಳು ಹೆಚ್ಚವರಿಯಾಗಿವೆ ಎಂಬುದನ್ನು ಗುರುತಿಸಿ, ಮೂಲ ಹಾಡಿನ ಆಶಯಕ್ಕೆ ಧಕ್ಕೆಯಾಗದಂತೆ ಹಾಡು ಪರಿಷ್ಕರಣೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಕಪ್ಪತ್ತಗುಡ್ಡ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆ ಒತ್ತಡ ಬಂದಿತ್ತು. ಆದರೆ, ಯಾವುದೇ ಕಾರಣಕ್ಕೂ ವನ್ಯಜೀವಿ ಧಾಮದಲ್ಲಿ ಚಿನ್ನದ ಗಣಿಗಾರಿಕೆ ಅವಕಾಶ ಕೊಡುವುದಿಲ್ಲ. ಸಂರಕ್ಷಿತ ಅರಣ್ಯ ಪ್ರದೇಶ ಹಾಗೂ ಪರಿಸರ ಸೂಕ್ಷ್ಮ ವಲಯದಲ್ಲಿ ಯಾವುದೇ ಕಾರಣಕ್ಕೂ ಗಣಿಗಾರಿಕೆ ಮಾಡುವಂತಿಲ್ಲ. ಅರಣ್ಯ ಪ್ರದೇಶ ಹಾಗೂ ಬೇರೆ ಪ್ರದೇಶಗಳಲ್ಲಿ ಭೋವಿ ಸಮಾಜಕ್ಕೆ ಕಲ್ಲು ಗಣಿಗಾರಿಕೆಗೆ ಯಾವುದೇ ಅಡ್ಡಿಯಿಲ್ಲ ಎಂದು ಲಿಂಬಾವಳಿ ಸ್ಪಷ್ಟಪಡಿಸಿದರು.

Advertisement

ಇದನ್ನೂ ಓದಿ: ಸಾ.ರಾ.ಮಹೇಶ್ ಹೇಳಿದ್ದನೆಲ್ಲಾ ಕೇಳಲು ನಾನು ಕೋಲೆ ಬಸವ ಅಲ್ಲ: ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next