Advertisement

‘ನಮ್ಮ ದೊಡ್ಡಬಳ್ಳಾಪುರ’ಆ್ಯಪ್‌ ಅಭಿವೃದ್ಧಿಗೆ ಚಿಂತನೆ

02:54 PM Jul 27, 2019 | Suhan S |

ದೊಡ್ಡಬಳ್ಳಾಪುರ: ತಾಲೂಕಿನ ಇಲಾಖೆಗಳ ಯೋಜನೆಗಳ ಮಾಹಿತಿ ಹಾಗೂ ಸೌಲಭ್ಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಲ್ಲಿ ಬೆಂಗಳೂರು ಒನ್‌ ರೀತಿಯಲ್ಲಿ ನಮ್ಮ ದೊಡ್ಡಬಳ್ಳಾಪುರ ಮೊಬೈಲ್ ಆ್ಯಪ್‌ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ. ಎಲ್ಲಾ ಇಲಾಖೆ ಮುಖ್ಯ ಅಧಿಕಾರಿಗಳು ಸಹಕರಿ ಸಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಡಿ.ಸಿ.ಶಶಿಧರ್‌ ಹೇಳಿದರು.

Advertisement

ಶುಕ್ರವಾರ ತಾಪಂ ಸಭಾಂಗಣದಲ್ಲಿ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ಆ್ಯಪ್‌ನಲ್ಲೇ ಎಲ್ಲ ಮಾಹಿತಿ: ‘ನಮ್ಮ ದೊಡ್ಡ ಬಳ್ಳಾಪುರ’ ಮೊಬೈಲ್ ಆ್ಯಪ್‌ ಅಭಿವೃದ್ಧಿಗೊಳಿಸಿ, ಇಲಾಖೆಗಳ ಮಾಹಿತಿಯನ್ನು ಸಮರ್ಪಕವಾಗಿ ದಾಖಲಿಸಿದರೆ ಯೋಜನೆ ತಿಳಿಯಲು ಇಲಾಖೆ ಕಚೇರಿಗಳಿಗೆ ಸಾರ್ವಜನಿಕರು ಅಲೆಯು ವುದು ತಪ್ಪಲಿದೆ. ಈ ನಿಟ್ಟಿನಲ್ಲಿ ಶಾಸಕರ ಸಹಕಾರದೊಂದಿಗೆ ತಾಪಂ ಬೇಕಾದ ಅನುದಾನ ದೊರಕಿಸಲು ಸಿದ್ಧ ವಿದೆ. ತಾಲೂಕಿನಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರು ಹೆಚ್ಚಿರುವುದರಿಂದ ಯೋಜನೆ ಯಶಸ್ವಿಯಾಗಲಿದೆ. ರಾಜ್ಯದಲ್ಲಿಯೇ ಪ್ರಥಮ ತಾಲೂಕು ಎಂಬ ಹಿರಿಮೆ ದೊರಕಲಿದೆ ಎಂದು ಹೇಳಿದರು.

ನಕಲಿ ವೈದ್ಯರ ಹಾವಳಿ ತಡೆಗೆ ಸಂಪೂರ್ಣ ಸ್ವಾತಂತ್ರ್ಯ: ನಕಲಿ ವೈದ್ಯರ ಹಾವಳಿ ತಡೆಗೆ ಆರೋ ಗ್ಯ ಇಲಾಖೆಗೆ ಮುಕ್ತ ಸ್ವಾತಂತ್ರ್ಯ ನೀಡು ತ್ತೇವೆ. ತಾಲೂಕಿನಲ್ಲಿ ಬೇನಾಮಿ ಹೆಸರಲ್ಲಿ ಚಿಕಿತ್ಸೆ, ನಕಲಿ ವೈದ್ಯರು, ಪಾರಂಪರಿಕ ಚಿಕಿತ್ಸೆ ನಕಲಿ ವೈದ್ಯರಾ ದರೂ ಅವರಿಂದ ತಾಲೂಕನ್ನು ಸಂಪೂರ್ಣ ಮುಕ್ತವಾಗಿಸಬೇಕೆಂದರು

ಆ್ಯಪ್‌ ಅಭಿವೃದ್ಧಿಗೆ ಅಧಿಕಾರಿಗಳು ಒಮ್ಮತದ ಬೆಂಬಲ ನೀಡಿದ್ದಾರೆ. ಹೀಗಾಗಿ ಆ್ಯಪ್‌ ಅನುಷ್ಠಾನದ ಹೊಣೆಯನ್ನು ಟಿಎಚ್ಒ ಪರಮೇಶ್ವರ ಅವರಿಗೆ ಹೊಣೆ ಹೊರಿಸಲಾಯಿತು.

Advertisement

ತಾಪಂ ಇಒ ದ್ಯಾಮಪ್ಪ ಮಾತನಾಡಿ, ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿ ವೇತನ ಸಮರ್ಪಕ ಅನುಷ್ಠಾನ, ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶಕ್ಕೆ ಹೆಚ್ಚಿನ ಒತ್ತು ನೀಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಮಾತನಾಡಿ, ಕರ್ನಾಟಕ ಪಬ್ಲಿಕ್‌ ಶಾಲೆಗೆ ಹೆಚ್ಚಿನ ಮನ್ನಣೆ ದೊರಕಿದ್ದು, ಹೋಬಳಿಗೊಂದು ಶಾಲೆ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಮಾತೃ ವಂದನೆ ಯೋಜನೆ ಸಮರ್ಪಕ ಅನುಷ್ಠಾನವಿಲ್ಲ: ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖೆ ಸಿಡಿಪಿಒ ಜಯಲಕ್ಷ್ಮಿ ಮಾತನಾಡಿ, ತಾಲೂಕಿನಲ್ಲಿ ಮಾತೃ ವಂದನೆ ಯೋಜನೆ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ. ಬಿಪಿಎಲ್ ಕಾರ್ಡ್‌ನಲ್ಲಿ ಹೊಸದಾಗಿ ಮದುವೆ ಯಾದ ಮಹಿಳೆಯರ ಹೆಸರು ಬಿಪಿಎಲ್ ಕಾರ್ಡ್‌ನಲ್ಲಿ ಇರದ ಕಾರಣಅನುಷ್ಠಾನ ಸಾಧ್ಯವಾ ಗುತ್ತಿಲ್ಲ. ನಗರ ವ್ಯಾಪ್ತಿಯಲ್ಲಿ ಮಾತೃ ಪೂರ್ಣ ಯೋಜನೆ ಫಲಾನುಭವಿಗಳು ಸ್ಪಂದಿಸದ ಕಾರಣ ತಾಲೂಕಿನಲ್ಲಿ ಶೇ.70 ಮಾತ್ರ ಯಶಸ್ವಿಯಾಗಿದೆ ಎಂದರು.

ಇಒ ದ್ಯಾಮಪ್ಪ ಮಾತನಾಡಿ, ಅಂಗನವಾಡಿಗಳು ಸರ್ಕಾರಿ ಶಾಲೆಗಳ ಕಟ್ಟಡಗಳನ್ನು ಬಳಸಿಕೊಳ್ಳಬೇಕು ಎಂದು ಸಿಡಿಪಿಒಗೆ ಸೂಚನೆ ನೀಡಿದರು.

ಹಾವು, ನಾಯಿ ಕಡಿತಕ್ಕೆ ಔಷಧ: ಟಿಎಚ್ಒ ಪರಮೇಶ್‌ ಮಾತನಾಡಿ, ತಾಲೂಕಿನ ಆಸ್ಪತ್ರೆಗಳಲ್ಲಿ ಹಾವು ಕಡಿತ ಚುಚ್ಚು ಮದ್ದು ಮತ್ತು ನಾಯಿ ಚುಚ್ಚುಮದ್ದು ಶೇಖರಣೆ ಮಾಡಲಾಗಿದೆ. ದೊಡ್ಡಬಳ್ಳಾಪುರದಲ್ಲಿ ರಕ್ತನಿಧಿ ಸ್ಥಾಪನೆಗೆ ಅವಕಾಶ ದೊರಕಿದ್ದು ಕಟ್ಟಡ ನೀಡಲು ಮನವಿ ಮಾಡಿದರು.

ತೋಟಗಾರಿಕೆ ಇಲಾಖೆ ಅಂಜನಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಪಿ. ನಾರಾಯಣಸ್ವಾಮಿ ಮಾತನಾಡಿದರು. ಪಶು ಸಂಗೋಪನೆೆ, ಅರಣ್ಯ, ಮೀನುಗಾರಿಕೆ, ತೋಟ ಗಾರಿಕೆ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ಪ್ರಗತಿಯ ವರದಿ, ಯೋಜನೆಗಳ ವಿವರ ತಿಳಿಸಿದರು. ತಾಪಂ ಉಪಾಧ್ಯಕ್ಷೆ ಮೀನಾಕ್ಷಿ ಕೆಂಪಣ್ಣ, ಇಒ ದ್ಯಾಮಪ್ಪ, ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next