Advertisement

ಪರಿಸರ ಹೋರಾಟಗಾರ್ತಿ ಗ್ರೇಟಾ ಹೋರಾಟಕ್ಕೆ ಪೋಷಕರ ಬೆಂಬಲವಿಲ್ಲ

09:58 AM Dec 31, 2019 | Hari Prasad |

ಲಂಡನ್‌: ಜಾಗತಿಕ ಹವಾಮಾನ ಬದಲಾವಣೆ ಕುರಿತು ಹೋರಾಟ ಹುಟ್ಟುಹಾಕಿ 16 ವರ್ಷ ವಯಸ್ಸಿನ ಬಾಲಕಿ ಗ್ರೇಟಾ ಥನ್ಬರ್ಗ್‌ ಜಾಗತಿಕ ಮಟ್ಟದಲ್ಲಿ ಪ್ರಶಂಸೆಗೆ ಒಳಗಾದವಳು. ಆದರೆ ಆಕೆ ನಡೆಸುತ್ತಿರುವ ಹೋರಾಟಕ್ಕೆ ಸ್ವತಃ ಆಕೆಯ ಪೋಷಕರ ಬೆಂಬಲವೇ ಇಲ್ಲ.

Advertisement

ಈ ಕುರಿತು ವಾಹಿನಿಯೊಂದರ ಜತೆ ಅಭಿಪ್ರಾಯ ಹಂಚಿಕೊಂಡಿರುವ ಆಕೆಯ ತಂದೆ, ಗ್ರೇಟಾ ಈ ಹೋರಾಟದ ಮುಂಚೂಣಿ ವಹಿಸಿದ್ದು ಒಂದು ಕೆಟ್ಟ ಯೋಚನೆ. ಆಕೆ ಶಾಲೆಗೆ ಹಾಜರಾಗದೆ ಹೋರಾಟಗಳಲ್ಲಿ ಭಾಗವಹಿಸುವುದು ಇಷ್ಟವಿಲ್ಲ. ಆಕೆ ಸುಮಾರು 3 ವರ್ಷಗಳ ಕಾಲ ಖನ್ನತೆಯಿಂದ ಬಳಲಿದ್ದಾಳೆ. ಚಿಕಿತ್ಸೆ ಪಡೆಯುತ್ತಿದ್ದ ಆಕೆ ಇಷ್ಟು ಬೇಗ ಹೋರಾಟಕ್ಕೆ ಧುಮುಕಿರುವುದು ಸರಿಯಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next