ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರದ(ಪಿಓಕೆ) ಅವಲಾಂಚಿಯಲ್ಲಿ 18 ಗಂಟೆಗಳ ಕಾಲ ಹಿಮದಡಿಯಲ್ಲಿ ಸಿಲುಕಿದ್ದ 12 ವರ್ಷದ ಬಾಲಕಿಯನ್ನು ವಿಪ್ಪತ್ತು ನಿರ್ವಹಣಾ ಅಧಿಕಾರಿಗಳು ರಕ್ಷಿಸಿದ್ದಾರೆ.
ಸಮೀರಾ ಬೀಬಿ ಎಂಬ ಬಾಲಕಿ ತನ್ನ ಕೋಣೆಯಲ್ಲಿದ್ದಾಗ ಹಿಮಪಾತವಾಗಿದೆ. ಪರಿಣಾಮವಾಗಿ ಗಂಟೆಗಳ ಕಾಲ ಹಿಮದಡಿಯಲ್ಲಿ ಸಿಲುಕಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾಳೆ. ಬಾಲಕಿಯ ಚೀರಾಟವನ್ನು ಕೇಳಿ ಅಲ್ಲಿಗೆ ಆಗಮಿಸಿದ ವಿಪ್ಪತ್ತು ನಿರ್ವಹಣಾ ಅಧಿಕಾರಿಗಳು ಆಕೆಯನ್ನು ರಕ್ಷಿಸಿ ವಿಮಾನದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಾನು ಅಲ್ಲಿಯೇ ಸಾಯುತ್ತೇನೆಂದು ಭಾವಿಸಿದೆ ಎಂದು ಆ ಬಾಲಕಿ ಆ ವೇಳೆ ಕಣ್ಣೀರಿಟ್ಟಿದ್ದಾಳೆ. ಆಕೆಯ ಒಂದು ಕಾಲು ಹಿಮದಡಿಗೆ ಸಿಲುಕಿ ನಜ್ಜುಗುಜ್ಜಾಗಿದೆ.
ಸಮೀನಾಳ ತಾಯಿ ಶಹನಾಜ್ ಬೀಬಿ ಈ ವೆಲೆ ಪ್ರತಿಕ್ರಿಯಿಸಿ ನಾನು ಒಬ್ಬ ಮಗ ಮತ್ತು ಮಗಳನ್ನು ಕಳೆದುಕೊಂಡಿದ್ದೇನೆ. ಮತ್ತೊಬ್ಬಳು ಮಗಳು ಈ ಹಿಮಪಾತದಿಂದ ಬದುಕುಳಿದಿದ್ದು ಪವಾಡವೇ ಸರಿ. ಭಾರೀ ಹಿಮಪಾತದಿಂದ 3 ಅಂತಸ್ತಿನ ಕಟ್ಟಡ ಕುಸಿದು 18 ಜನರನ್ನು ಕಳೆದುಕೊಂಡೆವು ಎಂದು ಕಣ್ಣೀರಿಟ್ಟಿದ್ದಾರೆ.
ಭಾನುವಾರದಿಂದ ಅವಲಾಂಚಿಯಲ್ಲಿ ಭಾರೀ ಹಿಮಪಾತವಾಗುತ್ತಿದ್ದು 76 ಜನರು ಸಾವನ್ನಪ್ಪಿದ್ದಾರೆ. 21 ಶವಗಳನನನ್ನು ಗುರುತಿಸಲಾಗಿದೆ. ನೀಲಂ ಕಣಿವೆ ಅತೀ ಹೆಚ್ಚು ಹಾನಿಗೊಳಗಾಗಿದೆ ಎಂದು ವಿಪ್ಪತ್ತು ನಿರ್ವಹಣಾ ಸಚಿವ ಆಹಮದ್ ರಾಜಾ ಕ್ವಾದ್ರಿ ತಿಳಿಸಿದ್ದಾರೆ.