ಬಾ ಹ್ಯಾಕಾಶ ಸಂಸ್ಥೆ ಇಸ್ರೋ ತಂತ್ರಜ್ಞಾನಗಳನ್ನು ಇನ್ನಷ್ಟು ವಾಣಿಜ್ಯ ವಲಯಕ್ಕೆ ಹತ್ತಿರವಾಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಭಾರತದ ಬಾಹ್ಯಾಕಾಶ ಸಾಮರ್ಥ್ಯವನ್ನು ವಾಣಿಜ್ಯೀಕರಣಗೊಳಿಸಿ ಸಾರ್ವಜನಿಕ ವಲಯದ ಉದ್ಯಮವಾಗಿರುವ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ನೊಂದಿಗೆ ಭಾರತೀಯ ಭಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ತಂತ್ರಜ್ಞಾನ ಪ್ರಯೋಜನವನ್ನು ಸಂಯೋಜಿಸಲು ಉದ್ದೇಶಿಸಲಾಗಿದೆ ಎಂದಿದ್ದಾರೆ.
ಸಾರ್ವಜನಿಕ ವಲಯದ ಉದ್ಯಮವು ಇಸ್ರೋದ ವಾಣಿಜ್ಯೀಕರಣದ ಭಾಗವಾಗಿದೆ ಮತ್ತು ಉಡಾವಣಾ ವಾಹನಗಳು ಹಾಗೂ ಬಾಹ್ಯಾಕಾಶ ಉತ್ಪನ್ನ, ತಂತ್ರಜ್ಞಾನವನ್ನು ವ್ಯಾಪಾರ ವಲಯಕ್ಕೆ ಅನುಕೂಲವಾ ಗುವಂತೆ ಜಾಗತಿಕವಾಗಿ ಕಡಿಮೆ ವೆಚ್ಚದಲ್ಲಿ ಸಾಮಾನ್ಯರಿಗೂ ಎಟಕುವಂತೆ ಕಲ್ಪಿಸಲಾಗುವುದು ಎಂದು ಸೀತಾರಾಮನ್ ತಿಳಿಸಿದರು.
ಇಸ್ರೋ ಇತ್ತೀಚೆಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದು, ಇದೇ ತಿಂಗಳಲ್ಲಿ ಭಾರತದ ಚಂದ್ರಯಾನ 2 ವೇಳೆ ಇಸ್ರೋ ನಾಸಾ ನಿರ್ಮಿತ ಲೇಸರ್ ಸಾಧನವೊಂದನ್ನು ಚಂದ್ರನಿಗೆ ತಲುಪಿಸಲಿದೆ. ಹೀಗಾಗಿ ದೇಶದ ಬಾಹ್ಯಾಕಾಶ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸುವ ಅವಕಾಶವನ್ನು ಬಳಸಿಕೊಳ್ಳಲು ಸರ್ಕಾರ ಚಿಂತಿಸಿದೆ ಎಂದರು. ಇಸ್ರೋ ವಾರ್ಷಿಕ ಬಜೆಟ್ ಸುಮಾರು 10,000 ಕೋಟಿ ರೂ. ದಾಟಿದೆ. ಕಳೆದ 5 ವರ್ಷಗಳಿಗೆ ಹೋಲಿಸಿದರೆ ಸುಮಾರು 6,000 ಕೋಟಿ ರೂ. ಹೆಚ್ಚಳವಾಗಿದೆ ಎಂದರು.