Advertisement

ತೋತಾಪುರಿ-2 ಪೋಸ್ಟರ್ ರಿಲೀಸ್

06:45 PM Jul 07, 2023 | Team Udayavani |

ಡಾಲಿ ಧನಂಜಯ್‌ ಹಾಗೂ ಜಗ್ಗೇಶ್‌ ನಾಯಕರಾಗಿ ನಟಿಸಿರುವ “ತೋತಾಪುರಿ-2′ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದೆ. ಇಷ್ಟು ದಿನ ಬೇರೆ ಬೇರೆ ರೀತಿಯ ಪೋಸ್ಟರ್‌ ಮೂಲಕ ಅಖಾಡಕ್ಕಿಳಿದಿದ್ದ ಚಿತ್ರತಂಡ ಈ ಬಾರಿ ಚಿತ್ರದ ಪ್ರಮುಖ ಪಾತ್ರಗಳ ಪೋಸ್ಟರ್‌ ಬಿಟ್ಟು, ಪಾತ್ರ ಪರಿಚಯ ಮಾಡಿದೆ.

Advertisement

ಈ ಚಿತ್ರದಲ್ಲಿ ಡಾಲಿ ಧನಂಜಯ ಅಲ್ಲದೆ ಜಗ್ಗೇಶ್‌, ದತ್ತಣ್ಣ, ಸುಮನ ರಂಗನಾಥ್‌, ಅದಿತಿ ಪ್ರಭುದೇವ, ವೀಣಾ ಸುಂದರ್‌, ಹೇಮಾದತ್‌.. ಹೀಗೆ ಮೊದಲ ಭಾಗದಲ್ಲಿದ್ದ ಬಹುತೇಕ ಪಾತ್ರಗಳು ಮುಂದುವರಿಯಲಿವೆ.

“ಪೋಸ್ಟ್‌ ಪ್ರೊಡಕ್ಷನ್‌ ಹಂತದ ಸಣ್ಣಪುಟ್ಟ ಕೆಲಸಗಳು ನಡೆಯುತ್ತಿದ್ದು, ಸದ್ಯದಲ್ಲೇ ಮೊದಲ ಪ್ರತಿ ಹೊರಬರಲಿದೆ. ನಂತರ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಲಾಗುವುದು. ನಮ್ಮ ನಿರೀಕ್ಷೆಯಂತೆಯೇ ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಪ್ರೇಕ್ಷಕರಿಗೆ ಇಷ್ಟವಾಗುವ ಮನರಂಜನಾತ್ಮಕ ಕಂಟೆಂಟ್‌ ಚಿತ್ರದಲ್ಲಿದೆ.

ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರಿಗೆ ಉತ್ತಮ ಮನರಂಜನೆಯ ಜೊತೆ ಕಾಮಿಡಿ ಪಂಚ್‌ ನೀಡಲಿದೆ’ ಎನ್ನುವುದು ನಿರ್ಮಾಪಕ ಕೆ.ಎ.ಸುರೇಶ್‌ ಅವರ ಮಾತು.

Advertisement

Udayavani is now on Telegram. Click here to join our channel and stay updated with the latest news.

Next